ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ:  ಇಂಜಿನಿಯರ್ ಸಾವು

ಬೆಂಗಳೂರು,ಆಗಸ್ಟ್,19,2025 (www.justkannada.in): ಬೈಕ್ ಗೆ  ಬಿಎಂಟಿಸಿ ಬಸ್ ಡಿಕ್ಕಿಯಾಗಿ  ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂಜಯ್ ನಗರದಲ್ಲಿ ಈ ಘಟನೆ ನಡೆದಿದೆ. ರೋಷನ್ ಮೃತಪಟ್ಟ ಇಂಜಿನಿಯರ್. ಮಗುವಿಗೆ ಉಪಹಾರ ತರಲು ರೋಷನ್ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಬಿಎಂಟಿಸಿ ಬಸ್ 8ನೇ ಡಿಪೋಗೆ ಸೇರಿದ ಬಸ್  ಆಗಿದ್ದು ಸ್ಥಳಕ್ಕೆ ಸಂಜಯನಗರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Key words: BMTC, bus, collided ,bike, Engineer, death