ಬೆಂಗಳೂರು,ಫೆಬ್ರವರಿ,3,2026 (www.justkannada.in): ಇಂದು ರಕ್ತಚಂದ್ರಗ್ರಹಣ ಸಂಭವಿಸಲಿದ್ದು ವರ್ಷದ ಮೊದಲ ಚಂದ್ರ ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ಹಲವು ದೇಗುಲಗಳಲ್ಲಿ ಪೂಜಾ ಸಮಯದಲ್ಲಿ ಬದಲಾವಣೆ ಆಗಿದ್ದು, ಕೆಲವು ದೇಗುಲಗಳು ಬಂದ್ ಆಗಲಿದೆ.
ಹೋಳಿ ಹುಣ್ಣಿಮೆ ದಿನವೇ ಖಗೋಳದಲ್ಲಿ ರಕ್ತಚಂದ್ರ ಗ್ರಹಣ ಸಂಭವಿಸುತ್ತಿದ್ದು, ಮೈಸೂರಿನ ಚಾಮುಂಡೇಶ್ವರಿ, ಧರ್ಮಸ್ಥಳದ ಮಂಜುನಾಥಸ್ವಾಮಿ ಸೇರಿ ಹಲವು ದೇವಾಲಯಗಳಲ್ಲಿ ಕೆಲ ಸಮಯದವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರಲ್ಲ.
ಮಧ್ಯಾಹ್ನ 3:20ಕ್ಕೆ ಆರಂಭವಾಗಲಿರುವ ಈ ಗ್ರಹಣದ ಪ್ರಭಾವ ಸಂಜೆ 6:47ರವರೆಗೆ ಇರಲಿದ್ದು, ಸಂಜೆ 5:32ರ ಸುಮಾರಿಗೆ ಗ್ರಹಣದ ತೀವ್ರತೆ ಗರಿಷ್ಠ ಮಟ್ಟದಲ್ಲಿರಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಸುಮಾರು 25 ನಿಮಿಷಗಳ ಕಾಲ ಈ ಮನಮೋಹಕ ‘ಬ್ಲಡ್ ಮೂನ್’ ದೃಶ್ಯ ಗೋಚರಿಸಲಿದೆ ಎನ್ನಲಾಗಿದೆ.
ರಕ್ತ ಚಂದ್ರಗ್ರಹಣ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಮಧ್ಯಾಹ್ನ 3ರಿಂದ ರಾತ್ರಿ 8.30ವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರಲ್ಲ. ತಲಕಾವೇರಿರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಬಂದ್ ಆಗಲಿದ್ದು ಸಂಜೆ 7.15 ದೇಗುಲ ತೆರೆಯಲಿದೆ. ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 1.30ಕ್ಕೆ ರಿಂದ ಸಂಜೆ 7 ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಧರ್ಮಸ್ಥಳ ಮಂಜುನಾಥ ದೇಗುಲದಲ್ಲಿ ಮಧ್ಯಾಹ್ನ 1.30 ರಿಂದ ಸಂಜೆ 7.30ರವರೆಗೆ ದರ್ಶನಕ್ಕೆ ಅವಕಾಶ ಇರಲ್ಲ.
Key words: Blood Moon Eclipse, Today, many temples







