RSS ಬಿಜೆಪಿಯ ಪಿತೃಪಕ್ಷ – ಬಿಕೆ ಹರಿಪ್ರಸಾದ್ ಟೀಕೆ

ನವದೆಹಲಿ,ಸೆಪ್ಟಂಬರ್,29,2025 (www.justkannada.in): ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ. ಹರಿಪ್ರಸಾದ್ ಅವರು ಆರ್ ಎಸ್ ಎಸ್ ಬಿಜೆಪಿಯ ಪಿತೃಪಕ್ಷ ಎಂದು ಟೀಕಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್,  ಆರ್ ಎಸ್ ಎಸ್ ಬಿಜೆಪಿಯ ಪಿತೃಪಕ್ಷ. ಹಿಂದುಳಿದವರು, ಶೂದ್ರರನ್ನ ಎಂದೂ ಆರ್ ಎಸ್ಎಸ್ ಗೌರವಿಸಲ್ಲ ಹಿಂದುಳಿದವರು ಶೂದ್ರರನ್ನ  ಕಾಲಾಳುಯಗಳಾಗಿ ಬಳಸಿಕೊಂಡಿದೆ ಎಂದು ಕಿಡಿಕಾರಿದರು.

ಒಬಿಸಿಗಳಿಗೆ ಅವಕಾಶ ಸಿಕ್ಕರೆ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಹೀಗಾಗಿ ದುರುದ್ದೇಶದಿಂದ ಬಿಜೆಪಿ ಅಪಪ್ರಚಾರ ಮಾಡುತ್ತಿದೆ  ಆರ್ ಎಸ್ಎಸ್ ಉದ್ದೇಶವನ್ನ ಬಿಜೆಪಿ ಹೇಳುತ್ತಿದೆ ಎಂದು ಬಿಕೆ ಹರಿಪ್ರಸಾದ್ ಹರಿಹಾಯ್ದರು.

Key words: RSS, parent party ,BJP, BK Hariprasad