ಕಾಂಗ್ರೆಸ್ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿದೆ ಬಿಜೆಪಿ : ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್

ಬೆಂಗಳೂರು,ನವೆಂಬರ್,06,2020(www.justkannada.in) : ಕಾಂಗ್ರೆಸ್ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿರುವ ಬಿಜೆಪಿ, ಅವರ ಮೇಲೆ ಪೊಲೀಸ್, ಸಿಬಿಐ, ಆದಾಯ ತೆರಿಗೆ ಇಲಾಖೆ, ಇ.ಡಿ. ಮೊದಲಾದ ಕೇಂದ್ರಾಧೀನ ಸಂಸ್ಥೆಗಳ ಮೂಲಕ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.jk-logo-justkannada-logo

ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಇಂತಹ ಸವಾಲನ್ನು ಎದುರಿಸಿ ಗೆಲ್ಲುವ ಶಕ್ತಿಯನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದಿದ್ದಾರೆ.

ವಿನಯ ಕುಲಕರ್ಣಿ ವಿರುದ್ಧ ರಾಜ್ಯ ಪೊಲೀಸರು ಯಾವುದೇ ಆರೋಪ ಹೊರಿಸಿಲ್ಲ

ಮಾಜಿ ಸಚಿವ ವಿನಯ ಕುಲಕರ್ಣಿ ಜೊತೆ ನಾನು ಮಾತಾಡಿದ್ದು, ತಾನು ನಿರಪರಾಧಿ, ತನ್ನದೇನೂ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣ ಕುರಿತು ತನಿಖೆ ಮಾಡಿದ್ದ ರಾಜ್ಯದ ಪೊಲೀಸರು ಕೂಡಾ ಯಾವುದೇ ಆರೋಪ ಹೊರಿಸಿಲ್ಲ. ಇದರಿಂದ ನಿರಾಶೆಗೀಡಾದ ಬಿಜೆಪಿ ನಾಯಕರು ಸಿಬಿಐ ಮೂಲಕ ಅವರನ್ನು ಹಣಿಯಲು ಹೊರಟಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ವಿನಯ ಕುಲಕರ್ಣಿಯನ್ನು ಸಿಬಿಐ ಬಂಧಿಸಿರುವುದು ರಾಜಕೀಯ ದುರುದ್ದೇಶ

ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿರುವುದು ರಾಜಕೀಯ ದುರುದ್ದೇಶಪೂರಿತ ಕ್ರಮ. ಸೈದ್ಧಾಂತಿಕವಾಗಿ ರಾಜಕೀಯ ವಿರೋಧಿಗಳನ್ನು ಎದುರಿಸಲಾಗದ ಬಿಜೆಪಿ ಸಿಬಿಐ ನಂತಹ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷದ ದನಿ ಅಡಗಿಸಲು ಪ್ರಯತ್ನಿಸುತ್ತಿರುವುದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಎಂದು ಟ್ವೀಟ್ ಮೂಲಕ ಬೇಸರವ್ಯಕ್ತಪಡಿಸಿದ್ದಾರೆ.BJP,trying,lure,Congress,leaders,their,party,Former,CM Siddaramaiah,tweeted

key words : BJP-trying-lure-Congress-leaders-their-party-Former-CM Siddaramaiah-tweeted