ಬಿಜೆಪಿಯ ದ್ವೇಷದ ರಾಜಕಾರಣ ಅವರಿಗೇ ತಿರುಗುಬಾಣವಾಗಲಿದೆ : ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ

ಬೆಂಗಳೂರು,ನವೆಂಬರ್,06,2020(www.justkannada.in) :  ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ನಾಲ್ಕು ವರ್ಷಗಳ ಹಿಂದಿನ ಕೇಸ್  ಅನ್ನು ತೆಗೆದು ವಿನಯ್ ಕುಲ್ಕರ್ಣಿ ಬಂಧಿಸಿರುವುದು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

jk-logo-justkannada-logo

ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಬಿಜೆಪಿಯ ಈ ದ್ವೇಷದ ರಾಜಕಾರಣ ಅವರಿಗೇ ತಿರುಗುಬಾಣವಾಗಲಿದೆ. ಮುಂದೆ ಅವರು ಅಧಿಕಾರಕ್ಕೆ ಬಂದಾಗ ಅವರು ಕೂಡ ಹೀಗೆ ಮಾಡ್ತಾರೆ ಎಂದರು.

ರಾಜ್ಯದಲ್ಲಿರುವುದು ಲೂಟಿ ಕೋರ ಸರ್ಕಾರ

ಇನ್ನು ರಾಜ್ಯದಲ್ಲಿ  ಕೆಇಬಿ ಕಂಪನಿಗಳು ನಷ್ಟ ಅನುಭವಿಸುತ್ತಿವೆ ಎಂದು ಸರ್ಕಾರ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚು ಮಾಡಿದ್ದಾರೆ. ರಾಜ್ಯದಲ್ಲಿರುವುದು ಲೂಟಿ ಕೋರ ಸರ್ಕಾರವಾಗಿದೆ ಎಂದು ಕಿಡಿಕಾರಿದ್ದಾರೆ ಎಂದು ತಿಳಿದು ಬಂದಿದೆ.

BJP's,hate,politics,their,turn,Former,Minister HD Ravanna,barrage

key words : BJP’s-hate-politics-their-turn-Former-Minister HD Ravanna-barrage