ಬಿಜೆಪಿ 13 ಸ್ಥಾನ ಅಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲುತ್ತೆ-ಮಾಜಿ ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯ….

ಬೆಂಗಳೂರು,ಡಿ,8,2019(www.justkannada.in):  ಬಿಜೆಪಿ ಉಪಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿಕೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪಗೆ  ತಿರುಗೇಟು ನೀಡಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ 13 ಯಾಕೆ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಸಿಎಂ ಹೇಳಿಕೆ ಕುರಿತು ಇಂದು ಮಾಧ್ಯಮದ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  13 ಸ್ಥಾನಗಳನ್ನ ಬಿಜೆಪಿ ಗೆಲ್ಲುತ್ತೆ ಎನ್ನುವ ಸಿಎಂ ಬಿಎಸ್ ವೈ ಹೇಳಿಕೆ ಭ್ರಮೆ. 13 ಕ್ಷೇತ್ರ ಯಾಕೆ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿ ಬಿಡಿ.  ಬಿಜೆಪಿ ಏಕೆ ಎರಡು ಸ್ಥಾನಗಳಲ್ಲಿ ಸೋಲ್ತಾರೆ. 2ಸ್ಥಾನವನ್ನ ಸೋತು ಅವರಿಗೇಕೆ ಅನ್ಯಾಯ ಮಾಡುತ್ತಾರೆ. ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ.  ಎರಡು ಕ್ಷೇತ್ರಗಳಲ್ಲಿ ಸೋತು ಮತ್ತೇಕೆ ಅವರಿಗೆ ಅನ್ಯಾಯ ಮಾಡ್ತಾರೆ ಎಂದು ಲೇವಡಿ ಮಾಡಿದರು.

ಹಾಗೆಯೇ ರಾಮನಗರದಲ್ಲಿ ಕ್ಲಿನಿಂಗ್ ಕೆಲಸ ಶುರು ಎಂದು ಹೇಳಿಕೆ ನೀಡಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಗೆ ಟಾಂಗ್ ಕೊಟ್ಟ ಡಿ.ಕೆ ಶಿವಕುಮಾರ್, ನಾನು ಹೆಚ್.ಡಿಕೆ, ಪಿಜಿಆರ್ ಸಿಂಧ್ಯ ಅದೇ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದವು.  ನಮ್ಮಿಂದ ಆಗದ ಕೆಲಸವನ್ನ ಅವರು ಮಾಡಲಿ.  ಅಶ್ವಥ್ ನಾರಾಯಣ್ ಬಹಳ ಉತ್ಸುಕರಾಗಿದ್ದಾರೆ. ಅವರ ಉತ್ಸಹಕ್ಕೆ ನಾನೇಕೆ ಬೇಡ ಎನ್ನಲಿ ಎಂದು ಪರೋಕ್ಷವಾಗಿ ಕುಟುಕಿದರು.

Key words: BJP -winning – 15 seats-Former minister- DK Sivakumar- irony