ನಾಳೆವರೆಗೂ ಕಾಯುತ್ತೇವೆ, ವಿಶ್ವಾಸ ಮತ ಕೇಳದಿದ್ದರೆ ಮುಂದಿದೆ….. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜುಲೈ 21, 2019 (www.justkannada.in): ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನ್ ತೀರ್ಪು ಕೊಡಬಹುದು ಎನ್ನುವುದರ ಮೇಲಿದೆ. ಕುಮಾರಸ್ವಾಮಿ ಅವ್ರು ಅನಗತ್ಯ ವಿಳಂಬ ಮಾಡಬಾರದು ಎಂದು ಮಾಜಿ ಸಿಎಂ ಬಿ.ಎಸ್. ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುಪ್ರೀಂಕೋರ್ಟ್ ಶಾಸಕರಿಗೆ ಸದನಕ್ಕೆ ಬರಬೇಕು ಅಂತ ಬಲವಂತ ಮಾಡಬಾರದು ಎಂದು ಹೇಳಿದೆ. ನಾಳೆ ವಿಶ್ವಾಸ ಮತ ಮಾಡುವ ಭರವಸೆಯನ್ನು ಸ್ಪೀಕರ್ ಮತ್ತು ಸಿಎಂ ಕೊಟ್ಟಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮಾಡಿದರೆ ಪ್ರಜಾತಂತ್ರಕ್ಕೆ ದ್ರೋಹ ಮಾಡಿದಂತಾಗುತ್ತದೆ.  ನಾವು ನಾಳೆವರೆಗೆ ಕಾದು ನೋಡ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.