ಎಎಪಿ ಸರ್ಕಾರ ಬೀಳಿಸಲು ಬಿಜೆಪಿ ಯತ್ನ: ನಮ್ಮ ಶಾಸಕರಿಗೆ 25 ಕೋಟಿ ರೂ. ಆಮಿಷ-ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ.

ವದೆಹಲಿ,ಜನವರಿ,27,2024(www.justkannada.in):  ದೆಹಲಿಯಲ್ಲಿ ನಮ್ಮ ಆಮ್ ಆದ್ಮಿ ಸರ್ಕಾರವನ್ನ ಕೆಡವಲು ಬಿಜೆಪಿ ಯತ್ನಿಸುತ್ತಿದೆ. ನಮ್ಮ ಶಾಸಕರಿಗೆ 25 ಕೋಟಿ ರೂ. ಆಮಿಷ ಒಡ್ಡಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅರವಿಂದ ಕೇಜ್ರಿವಾಲ್,  ಬಿಜೆಪಿ ನಮ್ಮ ಶಾಸಕರನ್ನ ಖರೀದಿಸಲು ಮುಂದಾಗಿದೆ. ಪ್ರತಿ ಶಾಸಕರಿಗೆ 26 ಕೋಟಿ ಆಮಿಷ ಒಡ್ಡುತ್ತಿದೆ. ನಮ್ಮ ಏಳು ಶಾಸಕರನ್ನು ಸಂಪರ್ಕಿಸಿ ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದರು.

ನನ್ನನ್ನ ಯಾವುದೇ ಹಗರಣದಲ್ಲಿ ಬಂಧಿಸಲು ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕೆಡವಲು ಬಿಜೆಪಿ ಯತ್ನಿಸುತ್ತಿದೆ ಎಎಪಿ ಸರ್ಕಾರ ಬೀಳಿಸಲು ಸಂಚು  ರೂಪಿಸುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

Key words: BJP -trying – topple -AAP government-Arvind Kejriwal