ಬಿಜೆಪಿ ತನ್ನ ಪ್ರಣಾಳಿಕೆಯ ಶೇ.90 ರಷ್ಟನ್ನು ಈಡೇರಿಸಿಲ್ಲ: ನಾಳಿನ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತ- ಡಿ.ಕೆ ಶಿವಕುಮಾರ್ ಟೀಕೆ.

ಮೈಸೂರು,ಫೆಬ್ರವರಿ,16,2023(www.justkannada.in): ಬಿಜೆಪಿ ಸರ್ಕಾರ ಜನರಿಗೆ 90% ವಚನ ವಂಚನೆ ಮಾಡಿದೆ. ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ ನಾಳೆ ಮಂಡನೆ ಮಾಡುವ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾಳೆ ಬೆಳಗ್ಗೆ ಬಜೆಟ್ ಘೋಷಣೆ ಮಾಡ್ತಾ ಇದ್ದಾರೆ. ಇದು ಕೊನೆಯ ಒಂದು ಬಜೆಟ್ ಬಿಜೆಪಿ ಸರ್ಕಾರ ಜನರಿಗೆ 90% ವಚನ ವಂಚನೆ ಮಾಡಿದೆ. ಇದನ್ನ ಶೀಘ್ರದಲ್ಲೇ ರೀಲೀಸ್ ಮಾಡುತ್ತೇವೆ. ನೀವು ಜನರಿಗೆ ಕೊಟ್ಟ ಯಾವ ಕಾರ್ಯಕ್ರಮಗಳೂ ಜಾರಿಯಾಗಿಲ್ಲ. ಹಿಂದಿನ ಬಜೆಟ್ ಕೂಡ ಬರಿ ಘೋಷಣೆ, ಭರವಸೆಯ ಬಜೆಟ್ ಆಗಿತ್ತು. ನಾವು ಡಬಲ್ ಇಂಜಿನ್ ಸರ್ಕಾರದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ವಿ. ಅದು ಬರಿ ಹೊಗೆ ಬಿಟ್ಟು ಹೋಯ್ತು. ಹೋದ ವರ್ಷ ಓದಿದ ಬಜೆಟ್, ಬಜೆಟ್ ಪಾಸ್ ಮಾಡಿದ ಎಲ್ಲವನ್ನೂ ನೋಡಿದ್ದೇವೆ. ಬಜೆಟ್ ಮುನ್ನ ಹಿಂದಿನ ವರ್ಷದ ಬಜೆಟ್ ನ ರಿಪೋರ್ಟ್ ಕೊಡಬೇಕು. ಬಸವರಾಜ ಬೊಮ್ಮಾಯಿ ನುಡಿದಂತೆ ನಡೆದಿದ್ದೇನೆ ಎನ್ನುತ್ತಾರೆ. ಹಾಗಾದರೇ ಹಿಂದಿನ ಬಜೆಟ್ ರಿಪೋರ್ಟ್ ಕೊಡಬೇಕು. ಬಸವಣ್ಣ ನವರ ಹೆಸರಿಟ್ಟುಕೊಂಡಿದ್ದೀರಿ. ಮೊದಲು ಹಿಂದಿನ ರಿಪೋರ್ಟ್ ಕೊಡಬೇಕು ಎಂದು ಆಗ್ರಹಿಸಿದರು.

ನಿಮ್ಮ ಪಕ್ಷದ ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ ಶೇ 90 ರಷ್ಟುನ್ನ ಬಿಜೆಪಿ ಈಡೇರಿಸಿಲ್ಲ. ರೈತರ ಸಾಲ ಮನ್ನಾ ಮಾಡಲಿಲ್ಲ. ಯಡಿಯೂರಪ್ಪ ನವರು ರೈತರ ಶಾಲು ಹಾಕಿ ಪ್ರಮಾಣ ವಚನ ಸ್ವೀಕರಿಸಿದರು. ಬರಿ ಸುಳ್ಳಿನ ಸರಮಾಲೆಯನ್ನ ಸೃಷ್ಟಿಸಿದರು. ರೈತ ನಿಧಿ ಎಲ್ಲಿಟ್ಟಿದ್ದೀರಿ, ರೈತರಿಗೆ ಎಲ್ಲಿ 10 ಗಂಟೆ ವಿದ್ಯುತ್ ಕೊಟ್ರಿ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ನಾವು ಸುಮಾರು170 ಪ್ರಶ್ನೆ ಕೇಳಿದ್ದೇವೆ. ಆದರೆ ಸಿಎಂ ಬೊಮ್ಮಾಯಿ ಸರ್ಕಾರ ಒಂದಕ್ಕೂ ಉತ್ತರ ನೀಡಿಲ್ಲ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದ್ರಿ.ಜನರಿಗೆ ವಂಚನೆ ಮಾಡಿಕೊಂಡು ಬಂದಿರಿ. ನೀವು ಅಧಿಕಾರದಲ್ಲಿರಲು ಲಾಯಕ್ಕಿಲ್ಲ ಎಂದು ಕಿಡಿಕಾರಿದರು.dk

26 ಆಶ್ವಾಸನೆಗಳನ್ನ ಹೆಣ್ಣು ಮಕ್ಕಳಿಗೆ ಕೊಟ್ಟಿದ್ದರು. ಅದರಲ್ಲಿ24 ಅನ್ನು ಅನುಷ್ಟಾನ ಮಾಡಿಲ್ಲ. ಯುವಕರಿಗೆ 18 ಕಾರ್ಯಕ್ರಮಗಳ ಭರವಸೆ ಕೊಟ್ಟಿದ್ದರು ಅದರಲ್ಲಿ 17 ಭರವಸೆಗಳನ್ನು ಈಡೇರಿಸಿಲ್ಲ. ಎಸ್ಸಿ, ಎಸ್ಟಿ ಜನರಿಗೆ ಭಾರಿ ಅನ್ಯಾಯ ಮಾಡಿದ್ದಾರೆ. ಬಜೆಟ್ ಪುಸ್ತಕವನ್ನ ತೆಗೆದೇ ನೋಡಿಲ್ಲ ಇವರು. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಎಲ್ಲಿ ಕೊಟ್ಟಿದ್ದೀರಿ ತೋರಿಸಿ. ಸರ್ಕಾರ ಜನರಿಗೆ ಮೂಗಿನ ಮೇಲೆ ತುಪ್ಪು ಸವರುವುದ ಬದಲು ತಲೆ ಮೇಲೆ ಇಟ್ಟಿದ್ದಾರೆ. ವಾಸನೆಯನ್ನೂ ತೆಗೆಯಲು ಆಗುತ್ತಿಲ್ಲ. ನಾವು ಕೊಟ್ಟ ಭರವಸೆಗಳಲ್ಲಿ ಶೇ 90 ರಷ್ಟನ್ನು ಈಡೇರಿಸಿದ್ದೇವೆ. ನಿಮ್ಮ ಕಾಲಾವಧಿಯಲ್ಲಿ ಕರ್ನಾಟಕವನ್ನು ಕರಪ್ಶನ್ ಕ್ಯಾಪ್ಟನ್ ಮಾಡಿಬಿಟ್ಟಿರಿ ಎಂದು ಗುಡುಗಿದರು.

ಮೈಸೂರು ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ ಕೊಡಬೇಕು.?

ಇದೇ ವೇಳೆ ಸಂಸದ ಪ್ರತಾಪ್ ಸಿಂಹಗೆ  ಟಾಂಗ್ ನೀಡಿದ ಡಿ.ಕೆ ಶಿವಕುಮಾರ್,  ಮೈಸೂರು ಬೆಂಗಳೂರು ಹೈವೆಯಲ್ಲಿ ಸರ್ವಿಸ್ ರೋಡೇ ಇಲ್ಲ. ಟೋಲ್ ಯಾಕೆ ಕೊಡಬೇಕು.? ಸರ್ವಿಸ್ ರೋಡ್ ಕೊಡದೆ ನೀವು ಟೋಲ್ ಸಂಗ್ರಹ ಮಾಡೋ ಆಗಿಲ್ಲ. ಆಲ್ಟರ್ನೇಟಿವ್ ಸರ್ವಿಸ್ ಕೊಟ್ಟು ನಂತರ ನೀವು ಟೋಲ್ ಕಲೆಕ್ಟ್ ಮಾಡಿ. ಇಲ್ಲ ಅಂದರೆ ನಿಮ್ಮ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ಯಾರಿಸ್ ಮಾದರಿಯಲ್ಲಿ  ಅಭಿವೃದ್ಧಿ ಮಾಡುತ್ತೇನೆ ಎಂದಿರುವ ಮೋದಿ ಜೀ ದಯಮಾಡಿ ಪ್ಯಾರಿಸ್ ಮಾಡೋದು ಬೇಡ ಪ್ಯಾರಿಸ್ ತರ ಒಂದೇ ಒಂದು ರೋಡ್ ಮಾಡಸಿ ಸಾಕು. ಈ ಸರ್ಕಾರ ವಚನ ಭ್ರಷ್ಟ ಸರ್ಕಾರ ಎಂಧು ಕಿಡಿಕಾರಿದ ಡಿಕೆಶಿ,  ಬಿಜೆಪಿಯವರಿಗೆ ಆಡಳಿತ ಮಾಡಲು ಬರಲ್ಲ ಅವರಿಗೆ ಅನುಭವ ಇಲ್ಲ ಬರಿ ಕರಪ್ಶನ್ ಕರಪ್ಶನ್ ಅಷ್ಟೇ. ಭ್ರಷ್ಟಾಚಾರ ಮಾಡುವುದರಲ್ಲಿ ನಿಸ್ಸೀಮರು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಮತ್ತು ಪ್ರಚೋದನಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಅಶ್ವಥ್ ನಾರಾಯಣ್ ಮಾತಿಗೆ ನಾನು ಉತ್ತರ ಕೊಡಲ್ಲ. ಆ ಬಚ್ಚಲು ಬಾಯಿಗೆ  ನಾನು ಉತ್ತರ ಕೊಡುವಷ್ಟು ಮಟ್ಟಿಗೆ ನಾನು ಕೆಳ ಮಟ್ಟಕ್ಕೆ ಇಳಿಯಲ್ಲ. ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರೆ ಉತ್ತರ ಕೊಡಬೇಕು.

ಸುದೀಪ್ ನನ್ನ ಒಬ್ಬ ಸ್ನೇಹಿತ, ಅವರೂ ಕೂಡ ಸಮಾಜದಲ್ಲಿ ಒಂದೊಳ್ಳೆ ಸಾಧನೆ ಮಾಡಿದ್ದಾರೆ. ಸಾಮಾಜಿಕ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಿದ್ದೆ ನನ್ನ 35 ವರ್ಷಗಳ ಅನುಭವದಲ್ಲಿ ಅವರ ಜೊತೆ ಒಂದಷ್ಟು ಚರ್ಚೆ ಮಾಡಿದ್ದೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಎಂಎಲ್ ಸಿ ಧರ್ಮಸೇನ, ಮಾಜಿ ಶಾಸಕ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Key words: BJP – Tomorrow’s- budget – limited – speeches -only – DK Shivakumar