Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಕೋಲಾರದಲ್ಲಿ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧೆಗೆ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್- ಹೊಸಬಾಂಬ್ ಸಿಡಿಸಿದ ಶಾಸಕ ಶ್ರೀನಿವಾಸಗೌಡ.

ಕೋಲಾರದಲ್ಲಿ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧೆಗೆ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್- ಹೊಸಬಾಂಬ್ ಸಿಡಿಸಿದ ಶಾಸಕ ಶ್ರೀನಿವಾಸಗೌಡ.

ಕೋಲಾರ,ಫೆಬ್ರವರಿ,13,2023(www.justkannada.in): ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಲು ಕೋಲಾರ ಜಿಲ್ಲಾ ಗುತ್ತಿಗೆದಾರರ ಸಂಘದ  ಅಧ್ಯಕ್ಷ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್  ನೀಡಿದೆ ಎಂದು ಶಾಸಕ ಶ್ರೀನಿವಾಸಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಶ್ರೀನಿವಾಸ್ ಗೌಡ, ಜನವರಿ 25ರಂದು ಗುತ್ತಿದಾರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮನೆಗೆ ಭೇಟಿ ನೀಡಿದ್ದ ಸುಧಾಕರ್, ನಾವೇ ದುಡ್ಡು ಕೊಡ್ತೀವಿ. ಸಿದ್ದರಾಮಯ್ಯ ವಿರುದ್ದ ಎಲೆಕ್ಷನ್​ ಗೆ ನಿಂತುಕೊಳ್ಳಿ ಎಂದು ಆಫರ್ ನೀಡಿದ್ದಾರೆ. ಅದೂ  ವರ್ತೂರು ಪ್ರಕಾಶ್ ಸಮ್ಮುಖದಲ್ಲೆ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದೆ ಎಂದು ಬಾಂಬ್ ಸಿಡಿಸಿದ್ದಾರೆ.

ಅಲ್ಲದೆ ಕೋಲಾರ ಕ್ಷೇತ್ರದಿಂದ ಸಿದ‍್ಧರಾಮಯ್ಯ ಗೆದ್ದು ಸಿಎಂ ಆಗುವುದು ನಿಶ್ಚಿತ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Key words: BJP- ticket -offer – Krishnareddy-Kolar- MLA -Srinivas Gowda