Friday, August 21, 2026

BDA Apartments

Home Front Page ಬಿಜೆಪಿಗೆ ಸಿದ್ದರಾಮಯ್ಯ ಟಾರ್ಗೆಟ್: ಹೈಕಮಾಂಡ್ ಬೆನ್ನಿಗೆ ನಿಲ್ಲಬೇಕು- ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿಗೆ ಸಿದ್ದರಾಮಯ್ಯ ಟಾರ್ಗೆಟ್: ಹೈಕಮಾಂಡ್ ಬೆನ್ನಿಗೆ ನಿಲ್ಲಬೇಕು- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಆಗಸ್ಟ್,20,2024 (www.justkannada.in): ಬಿಜೆಪಿಯವರು ಸಿಎಂ ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಿಎಂ ಸಿದ್ದರಾಮಯ್ಯ ಬದಲಾವಣೆ ಸಾಧ್ಯವೇ ಇಲ್ಲ. ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರೆಯುತ್ತಾರೆ. ಸಿಎಂ ಸಿದ್ದರಾಮಯ್ಯ ಮೇಲೆ ಯಾವುದೇ ಆರೋಪ ಸಾಬೀತಾಗಿಲ್ಲ. ಸಿದ್ದರಾಮಯ್ಯರನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹೀಗಾಗಿ ಹೈಕಮಾಂಡ್ ಸಿಎಂ ಬೆನ್ನಿಗೆ ನಿಲ್ಲಬೇಕು. ಮುಂದೆ ತೆಲಂಗಾಣ ಸಿಎಂಗೂ ಸಮಸ್ಯೆ ಮಾಡ್ತಾರೆ. ತೆಲಂಗಾಣ ಸಿಎಂಗೂ ರಾಜ್ಯಪಾಲರು ನೋಟಿಸ್ ನೀಡಬಹುದು.  ರಾಜ್ಯಪಾಲರಿಂದ ನೋಟಿಸ್  ಕೊಟ್ಟು ಕೆಳಗೆ ಇಳಿಸಲು ಯತ್ನಿಸುತ್ತಾರೆ. ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ ಎಂದರು.

ಇನ್ನು ಪಕ್ಷ ಸಂಘಟನೆಯ ವಿಚಾರ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಚರ್ಚಿಸಿದ್ದೇವೆ.  ಬೆಳಗಾವಿ ಡಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

Key words: BJP, target, Siddaramaiah, Minister, Sathish Jarakiholi