ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಯಾದ ಶಾಸಕ ಮುನಿರತ್ನ ಹಾಗೂ ಹೆಚ್.ನಾಗೇಶ್…

ಬೆಂಗಳೂರು,ಜನವರಿ,13,2021(www.justkannada.in):  ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7ಮಂದಿ ನೂತನ ಸಚಿವರಾಗಿ ಸಿಎಂ ಬಿಎಸ್ ವೈ ಸಂಪುಟ ಸೇರ್ಪಡೆಯಾಗಿದ್ದಾರೆ. ಸಂಪುಟ ವಿಸ್ತರಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು ಹಲವು ಶಾಸಕರು ತಮ್ಮ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.jk-logo-justkannada-mysore

ಈ ಮಧ್ಯೆ  ಸಚಿವ ಸ್ಥಾನದಿಂದ ಹೆಚ್. ನಾಗೇಶ್ ಗೆ ಕೋಕ್ ಕೊಡಲಾಗಿದೆ. ನಿರೀಕ್ಷೆ ಇಟ್ಟುಕೊಂಡಿದ್ದ ಶಾಸಕ ಮುನಿರತ್ನಗೆ ಸಚಿವ ಸ್ಥಾನ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಿಜೆಪಿ ನಾಯಕರು ಸಮಾಧಾನಪಡಿಸಿದ್ದಾರೆ. ಈ ಮಧ್ಯೆ ಸಂಪುಟ ವಿಸ್ತರಣೆಯಾದ ಬೆನ್ನಲ್ಲೆ ಇದೀಗ ಶಾಸಕ ಮುನಿರತ್ನ ಹಾಗೂ ಹೆಚ್. ನಾಗೇಶ್  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿದ್ದಾರೆ.

bjp-state-incharge-arun-singh-meets-mla-murniratna-h-nagesh
ಕೃಪೆ- internet

ಕುಮಾರಕೃಪ ಅತಿಥಿಗೃಹದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಶಾಸಕ ಮುನಿರತ್ನ ಹಾಗೂ ಹೆಚ್. ನಾಗೇಶ್   ಭೇಟಿಯಾಗಿದ್ದಾರೆ.  ಇದೇ ವೇಳೆ  ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ  ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.

Key words:  BJP state- incharge-Arun Singh –meets-MLA- Murniratna- H Nagesh