Friday, August 21, 2026

BDA Apartments

Home Front Page ಬಿಜೆಪಿ ಹಗರಣ ಬಯಲಿಗೆಳೆಯಲು ಸಮಿತಿ: 2 ತಿಂಗಳಲ್ಲಿ ತನಿಖೆಗೆ ಸಿಎಂ ತಾಕೀತು- ಸಚಿವ ಸಂತೋಷ್ ಲಾಡ್

ಬಿಜೆಪಿ ಹಗರಣ ಬಯಲಿಗೆಳೆಯಲು ಸಮಿತಿ: 2 ತಿಂಗಳಲ್ಲಿ ತನಿಖೆಗೆ ಸಿಎಂ ತಾಕೀತು- ಸಚಿವ ಸಂತೋಷ್ ಲಾಡ್

ಬೆಳಗಾವಿ,ಸೆಪ್ಟಂಬರ್, 11,2024 (www.justkannada.in):  ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿನ ಹಗರಣಗಳ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. ಎರಡು ತಿಂಗಳಲ್ಲಿ ತನಿಖೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಬಿಜೆಪಿ ಹಗರಣಗಳ ತನಿಖೆಗೆ ಸಮಿತಿ ರಚನೆ ಆಗಿದೆ. ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ಆಗಿದೆ. 2 ತಿಂಗಳಲ್ಲಿ ತನಿಖೆ ನಡೆಸುವಂತೆ ಸಿಎಂ ತಾಕೀತು ಮಾಡಿದ್ದಾರೆ. ದೀಪಾವಳಿ ಒಳಗೆ ರಾಜ್ಯ ಸರ್ಕರ ಅಲ್ಲ ಕೇಂದ್ರ ಸರ್ಕಾರ ಪತನವಾಗುತ್ತೆ ಎಂದು ಎಂಎಲ್ ಸಿ ಸಿ.ಟಿ ರವಿಗೆ ಟಾಂಗ್ ಕೊಟ್ಟರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರೇ 5 ವರ್ಷವೂ ಸಿಎಂ ಆಗಿ ಇರುತ್ತಾರೆ. 5 ವರ್ಷ ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗುವುದಿಲ್ಲ. ಶಾಸಕರು, ಸಚಿವರು, ಸಂಸದರು ಸಿಎಂ ಸಿದ್ದರಾಮಯ್ಯ ಪರವಾಗಿದ್ದಾರೆ ಎಂದು ತಿಳಿಸಿದರು.

Key words: BJP scam, Committee, Minister,  Santosh Lad