ಹಾಲಿನ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಬೆಂಗಳೂರು,ಜೂನ್,29,2024 (www.justkannada.in): ರಾಜ್ಯದಲ್ಲಿ 2 ರೂಪಾಯಿ ಹಾಲಿನ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ನಡೆ ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತು.

ಹಾಲಿನ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ವಿರುದ್ದ ಬೆಂಗಳೂರು ಮಂಡ್ಯ ತುಮಕೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಹೋರಾಟ ನಡೆಸುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ತುಮಕೂರಿನಲ್ಲಿ  ಬಿಜೆಪಿ ಕಾರ್ಯಕರ್ತರು ಹೆಗಲ ಮೇಲೆ ನೇಗಿಲು ಗುದ್ದಲಿ ಹಿಡಿದು ಪ್ರತಿಭಟಿಸುವ ಮೂಲಕ ವಿನೂತನವಾಗಿ ಆಕ್ರೋಶ  ವ್ಯಕ್ತಪಡಿಸಿದರು. ಹಾಗೆಯೇ ಜಾನುವಾರುಗಳ ಜೊತೆಗೆ ರಸ್ತೆಗೆ ಇಳಿದು ಬಿಜೆಪಿ ಕಾರ್ಯಕರ್ತರು  ಧರಣಿ ನಡೆಸಿದರು. ಇನ್ನು ಹಾಲಿನ ದರ ಏರಿಕೆಗೆ ರಾಜ್ಯದ ಜನತೆ ಕೂಡ ವಿರೋಧ ವ್ಯಕ್ತಪಡಿಸಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

Key words: BJP, protest, against, government, milk, price, hike