ಶಿವಮೊಗ್ಗ ಮಹಾನಗರ  ಪಾಲಿಕೆ ಅಧಿಕಾರದ ಗದ್ದುಗೆ ಬಿಜೆಪಿ ಪಾಲು: ಮೇಯರ್ ಆಗಿ ಶಿವಕುಮಾರ್ ಆಯ್ಕೆ.

ಶಿವಮೊಗ್ಗ,ಅಕ್ಟೋಬರ್,28,2022(www.justkannada.in): ಶಿವಮೊಗ್ಗ ಮಹಾನಗರ  ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಮೇಯರ್ ಆಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಶಿವಕುಮಾರ್, ಉಪಮೇಯರ್ ಸ್ಥಾನಕ್ಕೆ ಲಕ್ಷ್ಮಿ ಶಂಕರನಾಯ್ಕ್ ನಾಮಪತ್ರ ಸಲ್ಲಿಸಿದ್ದರು.  ಕಾಂಗ್ರೆಸ್ ನಿಂದ ಮೇಯರ್ ಸ್ಥಾನಕ್ಕೆ ಆರ್.ಸಿ. ನಾಯ್ಕ್, ಉಪಮೇಯರ್ ಸ್ಥಾನಕ್ಕೆ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿಗೆ ಬಹುಮತವಿದ್ದ ಹಿನ್ನೆಲೆ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತವಾಗಿತ್ತು. ಇದೀಗ ಮೇಯರ್ ಆಗಿ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮಿ ಶಂಕರನಾಯ್ಕ್ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಒಟ್ಟು 23 ಸದಸ್ಯರಿದ್ದು, ಪಕ್ಷೇತರ ಸದಸ್ಯೆ ಧೀರರಾಜ್ ಹೊನ್ನವಿಲೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಮೇಯರ್  ಆಗಿ ಆಯ್ಕೆಯಾದ ಶಿವಕುಮಾರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾದ ಲಕ್ಷ್ಮೀ ಅವರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಭಿನಂದನೆ ಸಲ್ಲಿಸಿದ್ದಾರೆ

Key words: BJP-power – Shimoga- city Corporation- Mayor.