‘ ಕರೋನ ವಾರಿಯರ್ಸ್‌ ‘ ಗ್ಯಾಸ್ ಸಿಲಿಂಡರ್ ಡೆಲಿವರಿ ಹುಡುಗರಿಗೆ ಉಚಿತ ಧವಸ ಧಾನ್ಯ ಕಿಟ್ ಹಾಗೂ ಸಿಹಿ ವಿತರಣೆ.

 

ಮೈಸೂರು, ಮೇ 04, 2020 : ( www.justkannada.in news ) ನಗರದ ವಿದ್ಯಾರಣ್ಯಪುರಂನ ಪಾರ್ವತಿ ಎಚ್.ಪಿ ಗ್ಯಾಸ್ ಏಜೆನ್ಸಿ ಯಲ್ಲಿನ ಗ್ಯಾಸ್ ಡೆಲಿವರಿ ಯುವಕರಿಗೆ ಧವಸ ಧಾನ್ಯದ ಉಚಿತ ಕಿಟ್ ವಿತರಿಸಲಾಯಿತು.

ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಈ ಆಹಾರ ಧಾನ್ಯಗಳ ಕಿಟ್ ಹಾಗೂ ನಂದಿನಿ ಪೇಡ ಸಿಹಿ ವಿತರಿಸಲಾಯಿತು.

ಬಳಿಕ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಮೈಸೂರು ನಗರದಲ್ಲಿ ಭಾರತ್ ಗ್ಯಾಸ್, ಇಂಡೇನ್, ಎಚ್.ಪಿ.ಗ್ಯಾಸ್, ಶ್ರೀ ಗ್ಯಾಸ್ ನಲ್ಲಿ ವಿತರಣೆ ಮಾಡುವ ಸುಮಾರು 2.480 ಗ್ಯಾಸ್ ಡೆಲಿವರಿ ಯುವಕರ ಪಡೆಯಿದೆ. ಇವರುಗಳು ಪ್ರತಿ ನಿತ್ಯ ಮನೆಮನೆಗೆ ತೆರಳಿ ಗ್ಯಾಸ್ ಸಿಲಿಂಡರ್ ಗಳನ್ನು ( ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಉಜ್ವಲ ಗ್ಯಾಸ್ ) ವಿತರಣೆ ಮಾಡುತ್ತಿದ್ದಾರೆ.

bjp-obc-morcha-kit-corona-gas-cylinder-boys-mysore

ಕರೋನಾ ಸಂಧರ್ಭದಲ್ಲಿ ಎಲ್ಲಾ ನಾಗರೀಕರು ಮನೆಯಿಂದ ಹೊರ ಬರಬಾರದು ಎಂಬ ಕಟ್ಟು ನಿಟ್ಟಿನ ಆದೇಶವಿದೆ. ಇದನ್ನು ನಾಗರೀಕರು ಪಾಲಿಸಿದ್ದು, ಇದೇ ವೇಳೆ ಪ್ರತಿ ಮನೆಗಳಿಗೆ ತೆರಳಿ ಸಮರ್ಪಕವಾಗಿ ಸಿಲಿಂಡರ್ ವಿತರಣೆ ಮಾಡಿದ್ದು ಶ್ಲಾಘನೀಯ ಎಂದರು.
ಅದೇ ರೀತಿಯಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದಲ್ಲಿರುವ ಕನಕಗಿರಿ, ಗುಂಡೂರಾವ್ ನಗರ,ಅಶೋಕ ಪುರಂ, ಬಂಡಿಕೇರಿ, ತೊಣಚಿಕೊಪ್ಪಲು, ಜಯನಗರ ಭಾಗದ ಸುಮಾರು 846 ಗ್ಯಾಸ್ ಡಿಲಿವರಿ ಬಾಯ್ ಗಳಿದ್ದು ಇವರುಗಳ ಕುಟುಂಬ ನಿರ್ವಹಣೆ ಗೆ ಅಹಾರ ಪಡಿತರ ಹಾಗೂ ದಿನಸಿ ಕಿಟ್ ಕೊಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು.

ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ, ಗ್ಯಾಸ್ ಡೆಲಿವರಿ ಯುವಕರು ತಮ್ಮ ಪ್ರಾಣದ ಹಂಗನ್ನು ತೊರೆದು ಕರೋನಾ ಪ್ರಾರಂಭ ವಾದ ಸುಮಾರು 43 ದಿನಗಳ ಕಾಲ ನಿರಂತರವಾಗಿ ಸಿಲಿಂಡರ್ ವಿತರಣೆ ಮಾಡುವ ಮೂಲಕ ಸಮಾಜಿಕ ಜವಾಬ್ದಾರಿ ಮೆರೆದಿದ್ದಾರೆ. ಆದ್ದರಿಂದ ಈ ಯುವಕರು ಸಹ ಕರೋನಾ ವಾರಿಯರ್ಸ್‌ ಎಂದು ಅಭಿನಂಧಿಸಿದರು.

ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸೋಮ ಸುಂದರ್, ಮಾದ್ಯಮ ಸಂಚಾಲಕ ಪ್ರದೀಪ್ ಕುಮಾರ್, ರಮೇಶ್ ಕುರುಬಾರಳ್ಳಿ, ಜಯಶಂಕರ್, ಶರತ್, ರಾಜು. ಪ್ರಸಾದ್ ಹಾಜರಿದ್ದರು.

 

key words : bjp-obc-morcha-kit-corona-gas-cylinder-boys-mysore