ಉಪಚುನಾವಣೆ ಫಲಿತಾಂಶದ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು ಸಿಎಂ ಮನೆಯತ್ತ !

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಉಪ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸ್ಥಾನ ಆಕಾಂಕ್ಷಿಗಳ ದಂಡು ಸಿಎಂ ಮನೆಯತ್ತ ಧಾವಿಸುತ್ತಿದೆ.

ಹೌದು. ಇಂದು ಬೆಳಗ್ಗೆ ಬೆಳಗ್ಗೆ ಉಮೇಶ್ ಕತ್ತಿ ಮತ್ತು ರಾಮದಾಸ್ ಸೇರಿದಂತೆ ಹಲವು ಬಿಜೆಪಿ ಶಾಸಕೆಉ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇನ್ನು ಕೆ ಆರ್ ಪೇಟೆ ಶಾಸಕ ನಾರಾಯಣ ಗೌಡ ಕೂಡ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನನ್ನ ವಿರುದ್ಧ ಜೆಡಿಎಸ್ ದೊಡ್ಡ ದೊಡ್ಡ ಅಪವಾದ ಮಾಡಿದ್ರು. ಆದರೆ ಎಲ್ಲ ಅಪವಾದಗಳಿಂದ ನಾನು ಪಾಸಾಗಿ ಬಂದಿದ್ದೇನೆ. ಇದೀಗ ಯುದ್ಧ ಮುಗಿದಿದ್ದು, ಯಾರು ಯಾರಿಗೆ ಟೋಪಿ ಹಾಕಿದ್ರು ಅಂತ ಜನಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.