ಮಹಾರಾಷ್ಟ್ರಕ್ಕೆ ನೀರು ಬಿಡುವ ಸಿಎಂ ಬಿಎಸ್ ವೈ ಹೇಳಿಕೆ ಖಂಡಿಸಿದ ಬಿಜೆಪಿ ಶಾಸಕ ಉಮೇಶ್ ಕತ್ತಿ…

ಬೆಳಗಾವಿ,ಅ,18,2019(www.justkannada.in): ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರಕ್ಕೆ  ನೀರು ಹರಿಸುವುದಾಗಿ  ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ನೀಡಿದ್ದ ಹೇಳಿಕೆಯನ್ನ ಬಿಜೆಪಿ ಶಾಸಕ ಉಮೇಶ್ ಕತ್ತಿ ಖಂಡಿಸಿದ್ದಾರೆ.

ಈ ಬಗ್ಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಇಂದು ಮಾತನಾಡಿದ ಶಾಸಕ ಉಮೇಶ್ ಕತ್ತಿ,  ಮಹಾರಾಷ್ಟ್ರಕ್ಕೆ ನೀರು ಹರಿಸುವುದಾಗಿ ಬಿಎಸ್ ವೈ ನೀಡಿರುವ ಹೇಳಿಕೆಯನ್ನ ಖಂಡಿಸುತ್ತೇನೆ. ಮಹಾರಾಷ್ಟ್ರ ಬೇಸಿಗೆಯಲ್ಲಿ ನಮಗೆ ಒಂದು ಹನಿ ನೀರು ಬಿಟ್ಟಿಲ್ಲ. ಮತ ಪಡೆಯುವ ಸಲುವಾಗಿ ಸಿಎಂ ಬಿಎಸ್ ವೈ ಭಾಷಣ ಮಾಡಿದ್ದಾರೆ. ಚುನಾವಣೆ ವೇಳೆ ನೀರು ಹರಿಸುವುದಾಗಿ ಹೇಳುವುದು ಸುಲಭ. ಈ ಹಿಂದೆ ಇದೇ ತಂತ್ರ ಮಾಡಿ ಕಾಂಗ್ರೆಸ್ ಇಲ್ಲದಂತಾಂಗಿದೆ ಎಂದು ತಿಳಿಸಿದರು.

ಹಾಗೆಯೇ ಯಾರಿಗೆ ನೀರು ಬೇಕೋ ಅವರಿಗೆ ಕೊಡಿ. ಜನಪರ ಕೆಲಸಗಳನ್ನ ಮಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಶಾಸಕ ಉಮೇಶ್ ಕತ್ತಿ ಸಲಹೆ ನೀಡಿದರು. ಅಕ್ಟೋಬರ್ 21 ರಂದು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಸಾಂಗ್ಲಿ ಜಿಲ್ಲೆ ಸತ್ ಗ್ರಾಮದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ತುಬಚಿ, ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರುಹರಿಸುತ್ತೇವೆ. ನಮಗೆ  ಮತನೀಡಿ ಎಂದು ಭರವಸೆ ನೀಡಿದ್ದರು.

Key words: BJP MLA -Umesh katti-condemns -CM BSY- statement – Maharashtra