ಸಿದ್ದರಾಮಯ್ಯ ಅವರು ಈಗಲೂ ನಮ್ಮ ಆಪ್ತರು : ನೂತನ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ.

 

ಮೈಸೂರು, ಡಿ.10, 2019 : ( www.justkannada.in news ) ಮನಸ್ಸಿಗೆ ಬೇಜಾರಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ ಅನ್ಸತ್ತೆ. ಆದ್ರೆ ಅವರ ರಾಜೀನಾಮೆಯನ್ನ‌ ಹೈಕಮಾಂಡ್‌ ಅಂಗೀಕರಿಸೋಲ್ಲ ಅನ್ಸತ್ತೆ. ಮೈಸೂರಿನಲ್ಲಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ.

ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದಿಷ್ಟು….

ಸಿದ್ದರಾಮಯ್ಯ ನಮ್ಮ ಆಪ್ತರು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯನವರು 10ರಿಂದ 12 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ರು. ಆದ್ರೆ ಅವರ ನೀರಿಕ್ಷೆಯಂತೆ ಫಲಿತಾಂಶ ಬಂದಿಲ್ಲ. ಅದು ಬೇಸರವಾಗಿ ರಾಜೀನಾಮೆ ನೀಡರಬಹುದು. ಇದರಿಂದ ಕಾಂಗ್ರೆಸ್ ದುರ್ಬಲವಾಗಿಲ್ಲ. ಯಾವ ಸರ್ಕಾರ ಇರುತ್ತೋ ಆ ಪಕ್ಷವೇ ಉಪ ಚುನಾವಣೆ ಗೆಲ್ಲೋದು.

ಈ ಬಾರಿಯೂ ಹಾಗೇ ಆಗಿದೆ. ಜೆಡಿಎಸ್‌‌ನ ಈ ಸ್ಥಿತಿಗೆ ಅವರು ಒಂದೂವರೆ ವರ್ಷ ಮಾಡಿದ ಆಡಳಿತವೇ ಕಾರಣ. ಅವರು ನಮ್ಮೆಲ್ಲರನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಈ ಉಪಚುನಾವಣೆಯೇ ಬರ್ತಾ ಇರಲಿಲ್ಲ. ಮೈಸೂರಿನಲ್ಲಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ.

ನಾನು ಯಾವುದೇ ಖಾತೆ ಕೇಳಿಲ್ಲ. ಖಂಡಿಷನ್ ಹಾಕುವ ಮಟ್ಟದಲ್ಲಿ ನಾವಿಲ್ಲ. ಮೈಸೂರಿನಲ್ಲಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ. ಬಿಜೆಪಿ ಸೇರುವಾಗ ನಾವು ಕ್ಷೇತ್ರಕ್ಕೆ ಅನುದಾನ ಮಾತ್ರ ಕೇಳಿದ್ದು ಬಿಜೆಪಿಯವರು ಟಿಕೆಟ್ ನೀಡಿ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ.
ನಮ್ಮನ್ನ ಗೌರವದಿಂದ ನೋಡಿಕೊಂಡಿದ್ದಾರೆ. ನಾವು ಯಾವುದೇ ಖಾತೆ ಕೊಡಿ ಅಂತ ಕೇಳಿಲ್ಲ ಅವರು ಆ ಬಗ್ಗೆ ಮಾತನಾಡಿಲ್ಲ. ಇಂದು ಸಂಜೆ ನಾವೇಲ್ಲ ಒಂದು ಸಭೆ ಮಾಡ್ತಿವಿ. ಅಲ್ಲಿ ಸೋತವರು ಗೆದ್ದವರ ಬಗ್ಗೆ ಮುಂದಿನ ನಿರ್ಧಾರ ಮಾಡ್ತಿವಿ. ಮೈಸೂರಿನಲ್ಲಿ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ.

key words : bjp-mla-s.t.somashekar-mysore-congress-leadrer-siddaramaiha-friend