ಬಿಜೆಪಿ ನಾಯಕರಿಗೆ ಸಂಸ್ಕೃತಿಯೇ ಇಲ್ಲ: ಅವರದ್ದು ಹಿಟ್ಲರ್ ಮನಸ್ಥಿತಿ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…

ಮೈಸೂರು,ನ,20,2019(www.justkannada.in):  ಕುರುಬ ಸಮುದಾಯದ ವಿರುದ್ದ  ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಯಾವ ನಾಯಕರಿಗೂ ಸಂಸ್ಕೃತಿಯೇ ಇಲ್ಲ. ಅವರದ್ಧು ಹಿಟ್ಲರ್ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದರು.

ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಜೆಪಿಯವರದ್ದು ಪ್ಯಾಸಿಸ್ಟ್ ಪಕ್ಷ.  ಅವರು ನೈಜ ಮಾತುಗಳನ್ನಾಡಲ್ಲ.  ಸುಳ್ಳನ್ನ ಪ್ರಚಾರ ಮಾಡೋದೇ ಅವರ ಕೆಲಸ.  ಸುಳ್ಳನ್ನ ಸತ್ಯವನ್ನಾಗಿ ಮಾಡುವುದು. ಸತ್ಯವನ್ನ ಸುಳ್ಳನ್ನಾಗಿ ಮಾಡುವುದು ಅವರ ಕೆಲಸವಾಗಿದೆ. ಹಿಟ್ಲರ್ ಕೂಡ ಅದನ್ನೇ ಮಾಡುತ್ತಿದ್ದ ಎಂದು ಕಿಡಿಕಾರಿದರು.

ಹುಳಿಯಾರು ಪಟ್ಟಣದ  ಸರ್ಕಲ್ ಗೆ ಕನಕದಾಸರ  ಹೆಸರು ಇಡುವ ಸಂಬಂಧ ಕನಕಗುರು ಪೀಠದ  ಈಶ್ವರಾನಂದಪುರಿ ಸ್ವಾಮೀಜಿ ವಿರುದ್ದ ಸಚಿವ ಮಾಧುಸ್ವಾಮಿ  ಏರುಧ್ವನಿಯಲ್ಲಿ ಮಾತನಾಡಿದ್ದರು. ಇದಕ್ಕೆ ಕುರುಬ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ.

Key words: BJP leaders – no culture-Hitler- mentality-Former CM Siddaramaiah