ಬಿಎಸ್ ವೈ ಇಲ್ಲದೇ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಲು ಆಗಲ್ಲ- ಸಿದ್ಧರಾಮಯ್ಯ ಟೀಕೆ.

ಬೆಂಗಳೂರು,ಅಕ್ಟೋಬರ್,13,2022(www.justkannada.in):  ಬಿ.ಎಸ್ ಯಡಿಯೂರಪ್ಪ ಇಲ್ಲದೇ ಬಿಜೆಪಿ ನಾಯಕರು ಪ್ರಚಾರಕ್ಕೆ ಹೋಗಲು ಆಗುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಬಿಜೆಪಿ ನಾಯಕರಿಗೆ ನನ್ನ ಕಂಡರೇ ಭಯ. ರಾಜಕಾರಣ ಅಂದ್ರೆ ಜನರ ಸೇವೆ ಮಾಡೋದಲ್ವಾ ..? ಎಲ್ಲಾ ವಿಷಯದಲ್ಲೂ ಬಿಜೆಪಿಗೆ ಭಯವಿದೆ. ನ,ಮಗೆ ಹೊಂದಾಣಿಕೆ ಇಲ್ಲ ಅಂತಾರೆ. ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಇದೆಯಾ .  ಬಿಎಸ್ ವೈ ಇಲ್ಲದೇ ಇವರು ಪ್ರಚಾರಕ್ಕೆ ಹೋಗಲು ಆಗಲ್ಲ. ಇವರ ಮಧ್ಯೆ ಹೊಂದಾಣಿಕೆ ಇದೆಯಾ ಎಂದು ಟಾಂಗ್ ನೀಡಿದರು.

ನಳೀನ್ ಕುಮಾರ್ ಕಟೀಲ್ ವಿಧೂಷಕ, ಒಬ್ಬ ಪೊಲಿಟಿಕಲ್ ಜೋಕರ್  ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

Key words:  BJP –leaders-campaign –BSY- Siddaramaiah