ಮುಸ್ಲಿಂ ಮತಗಳ ವಿಭಜನೆಗೆ ಹೆಚ್.ಡಿಕೆಗೆ ಬಿಜೆಪಿ ಲಾಂಗ್ ಟರ್ಮ್ ಸುಪಾರಿ ನೀಡಿದೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ 

ಮೈಸೂರು, ಏಪ್ರಿಲ್,4,2022(www.justkannada.in): ಮುಸ್ಲಿಂ ಮತಗಳ ವಿಭಜನೆಗೆ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ಲಾಂಗ್ ಟರ್ಮ್ ಸುಪಾರಿ ನೀಡಿದೆ ಎಂದು  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್  ಲೇವಡಿ ಮಾಡಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ , ಕಳೆದ 2 ತಿಂಗಳಿನಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. ಈ  ಹಿನ್ನೆಲೆ  ಹಿಜಾಬ್, ಮುಸ್ಲಿಂರ ವ್ಯಾಪಾರಕ್ಕೆ ಕಡಿವಾಣ, ಭಗವತ್ ಗೀತೆ ಅಳವಡಿಸುವುದು, ಪಠ್ಯದಿಂದ ಟಿಪ್ಪು ಸುಲ್ತಾನ್ ತೆಗೆಯುವುದು ಹಾಗೂ  ಹಲಾಲ್ ವಿಚಾರಗಳನ್ನ ಮುಂದಿಡುತ್ತಿದ್ದಾರೆ. ರಾಜ್ಯದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ. ಬಿಜೆಪಿಯವರು ಬೇರೆಯವರ ಸಮಾಧಿ ಮೇಲೆ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು

ಹಾಗೆಯೇ ಹಲಾಲ್ ಕಟ್ ಬಗ್ಗೆ ಮಾತನಾಡುತ್ತಿರುವವರು ಯಾರೂ ಮಾಂಸ ತಿನ್ನುವವರಲ್ಲ. ಪ್ರಶಾಂತ್ ಸಂಬರಗಿ ಮಾಂಸ ತಿನ್ನುವವನಲ್ಲ. ಬಸವನಗುಡಿಯಲ್ಲಿ ಸಸ್ಯಾಹಾರಿಗಳು ಇದ್ದಾರೆ ಅದಕ್ಕೆ ಮಾತ್ರ ಅಲ್ಲಿ ಪ್ರಚಾರ ಮಾಡಿದ್ದಾರೆ ಅಷ್ಟೇ. ಬೆಂಗಳೂರಿನ ಬೇರೆ ಬೇರೆ ನಗರಗಳಲ್ಲಿ ಯಾಕೆ ಪ್ರಚಾರ ಮಾಡಿಲ್ಲ.? ಇದು ಬಿಜೆಪಿಯ ಸ್ಪಾನ್ಸರ್ಡ್ ಕಾರ್ಯಕ್ರಮವಾಗಿದೆ ಎಂದು ಎಂ.ಲಕ್ಷ್ಮಣ್ ಟೀಕಿಸಿದರು.

ಹೆಚ್ಡಿಕೆಗೆ ಬಿಜೆಪಿ ಲಾಂಗ್  ಟರ್ಮ್ ಸುಪಾರಿ ನೀಡಿದೆ. ಬಿಜೆಪಿಗರು ಕುಮಾರಸ್ವಾಮಿಯನ್ನ ಬಳಸಿಕೊಂಡು ಲಾಂಗ್ ಟರ್ಮ್ ಸುಪಾರಿ ಕೊಟ್ಟಿದ್ದಾರೆ. ಮುಸ್ಲಿಂ ಮತಗಳನ್ನು ಡಿವೈಡ್ ಮಾಡಲು  ಕುಮಾರಸ್ವಾಮಿಗೆ ಸುಪಾರಿ ಕೊಟ್ಟಿದೆ. ಕುಮಾರಸ್ವಾಮಿ ಯಾವಾಗ ಯಾರ ಪರ ಮಾತನಾಡುತ್ತಾರೋ ಗೊತ್ತಿಲ್ಲ. ಇದೀಗ ಇದ್ದಕ್ಕಿದ್ದ ಹಾಗೆ ಕುಮಾರಸ್ವಾಮಿ ಮಾತನಾಡುತ್ತಿರುವುದನ್ನ ನೋಡಿದರೆ ಸಿಎಂ ಬೊಮ್ಮಾಯಿ ಅವರೆ ಹೇಳಿ ಕಳುಹಿಸಿರುವಂತಿದೆ ಎಂದು ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಯಾಕೋ ಇತ್ತೀಚಿಗೆ  ಜಿಲ್ಲೆಗೆ ಬರುತ್ತಿಲ್ಲ. ನಮಗಿರುವ ಮಾಹಿತಿ ಪ್ರಕಾರ ಎಸ್.ಟಿ ಸೋಮಶೇಖರ್ ಅವರನ್ನ ಸಂಪುಟದಿಂದ ತೆಗೆಯುತ್ತಿದ್ದಾರೆಂಬ ಮಾಹಿತಿ ಇದೆ. ಇವರೊಂದಿಗೆ 8 ಮಂದಿ ಸಚಿವರನ್ನು ತೆಗೆದುಹಾಕುವ ಮಾಹಿತಿ ನಮಗಿದೆ.ಸದ್ಯದಲ್ಲೇ ಉಸ್ತುವಾರಿ ಸಚಿವರು ಸಂಪುಟದಿಂದ ಕೆಳಗಿಳಿಯಲಿದ್ದಾರೆ ಎಂದು ಭವಿಷ್ಯ ನುಡಿದರು.

Key words: bjp-HD Kumaraswamy- congress-Spokesperson-M.Lakshman

ENGLISH SUMMARY…

BJP has given a long-term supari to HDK to divide muslim votes: KPCC spokesperson M. Lakshmana
Mysuru, April 4, 2022 (www.justkannada.in): KPCC Spokesperson M. Lakshmana today ridiculed the BJP for giving a long-term supari to former Chief Minister H.D. Kumaraswamy to divide Muslim votes.
Addressing a press conference in Mysuru today, M. Lakshmana alleged that the BJP is trying to divert the attention of the people for the last two months, in the name of Hijab, Halal, including Bhagawadgeetha in the school curriculum, removing Tipu’s lessons, etc. “The BJP is auctioning the honor of the state. They are running the administration by sitting on others’ graves,” he alleged.
Further speaking on the occasion he alleged that none of the people who are opposing Halal are nonvegetarians. “Prashanth Sambaragi is a vegetarian. Many vegetarians are living in Basavanagudi, Bengaluru, that is why they are publicizing it, only there. If that is the case why the Halal issue is not being publicized in other areas? This shows that it is a BJP sponsored program,” he said.
“The BJP has given a long-term supari to former Chief Minister H.D. Kumaraswamy. It has given him the supari to divide the Muslim votes. That is why we can’t say on whose behalf HDK speaks. The way is behaving right now gives way for us to suspect that he is acting as per the orders of the present CM Basavaraj Bommai,” he ridiculed.
Keywords: KPCC Spokesperson M. Lakshmana/ BJP/ Former CM HDK/ supari