ಬಿಜೆಪಿಯವರಿಗೆ ರೇಡ್ ಮಾಡಿಸುವ ಚಟವಿದೆ- ಸಚಿವ ಮಧು ಬಂಗಾರಪ್ಪ ಕಿಡಿ

ಕೊಪ್ಪಳ,ಜುಲೈ,10,2024 (www.justkannada.in):  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಬಿಜೆಪಿಯವರಿಗೆ ರೇಡ್ ಮಾಡಿಸುವ ಚಟವಿದೆ. ಮೊದಲಿನಿಂದಲೂ  ರೇಡ್ ಮಾಡಿಸುವ ಚಾಳಿ ಬಿಜೆಪಿಯವರಿಗಿದೆ. ಬಿ. ನಾಗೇಂದ್ರ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಹಗರಣದ ಬಗ್ಗೆ  ಮಾಹಿತಿ ಇಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಹಿತಿ ಇಲ್ಲ ಎಂದಿದ್ದಾರೆ.  ಇದನ್ನು ಹಾದಿ ಬೀದಿಯಲ್ಲಿ ಕುಳಿತು ಮಾತನಾಡಲು ಆಗಲ್ಲ ಎಂದರು.

Key words: BJP, habit, raiding, Minister, Madhu Bangarappa