ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ  ಕೇವಲ 6 ತಿಂಗಳು ಮಾತ್ರ ಇರುತ್ತೆ- ಭವಿಷ್ಯ ನುಡಿದ ‘ಕೈ’ ಶಾಸಕ

ಕೊಪ್ಪಳ,ಆ,20,2019(www.justkannada.in): ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 6 ತಿಂಗಳು ಮಾತ್ರ ಅಧಿಕಾರದಲ್ಲಿರುತ್ತದೆ ಎಂದು ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಭವಿಷ್ಯ ನುಡಿದಿದ್ದಾರೆ.

ಕೊಪ್ಪಳದಲ್ಲಿ ಇಂದು ಮಾತನಾಡಿದ ಅಮರೇಗೌಡ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇವಲ 6 ತಿಂಗಳು ಮಾತ್ರ ಇರುತ್ತೆ. ಬಿಜೆಪಿಯವರು ಲೂಟಿ ಮಾಡಿ ಮನೆಗೆ ಹೋಗ್ತಾರೆ, ಅಥವಾ ಅವರೇ ಬಡಿದಾಡಿಕೊಂಡು ಮನೆಗೆ ಹೋಗ್ತಾರೆ ಎಂದು ತಿಳಿಸಿದರು.

ಇಂದು ಸಂಜೆಯೊಳಗೆ ಏನೆಲ್ಲಾ ಆಗುತ್ತದೆ ಎನ್ನುವುದನ್ನ ನೋಡಿ. ಬೆಳಗಾವಿಯವರು ಈಗ ಆರಂಭ ಮಾಡಿದ್ದಾರೆ. ಅವರೇ ಕೊನೆ ಮಾಡುತ್ತಾರೆ ಎಂದು ಅಮರೇಗೌಡ ತಿಳಿಸಿದರು.

Key words: BJP government – only- 6 months –congress –MLA-predict