ಬಿಜೆಪಿಯವರು ಸರ್ಕಾರ ರಚಿಸಿದ್ರೆ ಹೆಚ್ಚು ದಿನ ಉಳಿಯಲ್ಲ- ಬಿ.ಎಸ್ ವೈಗೆ ಎಚ್ಚರಿಕೆ ಕೊಟ್ಟು ಭವಿಷ್ಯ ನುಡಿದ ಮಾಜಿ ಸಿಎಂ ಸಿದ್ದರಾಮಯ್ಯ…

ಬೆಂಗಳೂರು,ಜು,23,2019(www.justkannada.in): ಬಿಜೆಪಿಯವರು ಸರ್ಕಾರ ರಚಿಸಿದ್ರೆ ಹೆಚ್ಚು ದಿನ ಉಳಿಯಲ್ಲ. ಬಿಎಸ್ ಯಡಿಯೂರಪ್ಪನವರೇ ಹೆಚ್ಚು ದಿನ ಉಳಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಬಿಜೆಪಿಗೆ ಎಚ್ಚರಿಕೆ ರವಾನಿಸಿದರು.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ಅಂದು ಬಿಜೆಪಿಗೆ  15 ದಿನ ವಿಶ್ವಾಸ ಮತಯಾಚನೆಗೆ ಸಮಯ ನೀಡಿದ್ರೆ  ಇಂದು ನಡೆಯುತ್ತಿದ್ದ ಪ್ರಜಾಪ್ರಭುತ್ವದ ಕಗ್ಗೋಲೆ ಅಂದೇ ನಡೆಯುತ್ತಿತ್ತು. ಅವತ್ತೇ ಕುದುರೆ ವ್ಯಾಪಾರ ಮಾಡುತ್ತಿದ್ದರು. ಅವರಿಗೆ ಇದ್ದುದ್ದು 104 ಸ್ಥಾನ ಮಾತ್ರ.  ಸರ್ಕಾರ ರಚಿಸಲು 113 ಬೇಕಿತ್ತು.  ಹೀಗಾಗಿ ಹೋಲ್ ಸೇಲ್ ಆಗಿ ಕರ್ಕೊಂಡಿದ್ದಾರೆ.  ಪ್ರಜಾಪ್ರಭುತ್ವ ಕೊಲೆ ಮಾಡಿ ಅಧಿಕಾರಕ್ಕೆ ಬರುವುದಾದರೇ ಅದು ಒಂದು ದಿನ ನಿಮಗೆ ತಿರುಗುಬಾಣವಾಗುತ್ತದೆ.   ಬಿಜೆಪಿಯವರು ಸರ್ಕಾರ ರಚಿಸಿದ್ತೆ ಹೆಚ್ಚು ದಿನ ಉಳಿಯಲ್ಲ. ಬಿಎಸ್ ವೈ ನೀವು ಹೆಚ್ಚು ದಿನ ಇರಲ್ಲ.  ಇವರನ್ನ ಕಟ್ಟಿಕೊಂಡು ಸರ್ಕಾರ ಮಾಡಲು ಆಗಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ  ನೀಡಿದರು.

10ನೇ ಶೆಡ್ಯೂಲ್ ಅನ್ನ ಎಲ್ಲಾ ಪಕ್ಷದವರಿಗೂ ಸೇರಿಸಿ ಮಾಡಿದ್ದಾರೆ. ಪಕ್ಷಾಂತರ ರೋಗ ಬೆಳೆಯಲು ಬಿಟ್ಟರೇ ಯಾವ ಸರ್ಕಾರ ಉಳಿಯಲು ಸಾಧ್ಯ…? ಒಬ್ಬರು ಹೋದ್ರೆ ಅಪಾಯ ಅಲ್ಲ. ಅದ್ರೆ ಎಲ್ಲರೂರೂ ಒಟ್ಟಾಗಿ ಹೋದ್ರೆ ಅಪಾಯ. ಎಲ್ಲರೂ ಈ ರೀತಿ ಹೋಲ್ ಸೇಲ್ ಟ್ರೇಡ್ ಆದರೆ ಅಪಾಯ. ಪ್ರಜಾಪ್ರಭುತ್ವ ಅಲ್ಲಾಡುತ್ತಿದೆ. ಹಣ ಅಧಿಕಾರ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಬಿಜೆಪಿಯವರು ಅತೃಪ್ತ ಶಾಸಕರ ರಾಜೀನಾಮೆಗೂ  ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಯಾಕೆ ಬಹಿರಂಗ ಬಿಜೆಪಿಯವರೇ ಕುದುರೆ ವ್ಯಾಪಾರ ಮಾಡುತ್ತಿದ್ದಾರೆಂದು ಗೊತ್ತು.  ಬಹಿರಂಗವಾಗಿ ಹೇಳಿಬಿಡಿ. ಕುದುರೆ ವ್ಯಾಪಾರದ ಮೂಲಕ  ನೀವು ಹಿಂಭಾಗಿಲಿನಿಂದ ಅಧಿಕಾರ ಹಿಡಿಯಲು ಯತ್ನಿಸಿದ್ದೀರಿ. ನಿಮ್ಮನ್ನ ಜನ ಕ್ಷಮಿಸಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡ್ತಾರೆ.

Key words: BJP- formation – government -did not- last long- former CM Siddaramaiah -warned -BSY.