Saturday, August 22, 2026

BDA Apartments

Home Front Page ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ಮಾತ್ರ ಚುನಾವಣೆಯಿಂದ ವಾಪಸ್ – ಕೆ.ಎಸ್ ಈಶ್ವರಪ್ಪ.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ಮಾತ್ರ ಚುನಾವಣೆಯಿಂದ ವಾಪಸ್ – ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಏಪ್ರಿಲ್,2, 2024 (www.justkannada.in): ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಚುನಾವಣೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ.

ಆದರೂ ಸಹ ಪಟ್ಟು ಬಿಡದ ಕೆ.ಎಸ್ ಈಶ್ವರಪ್ಪ, ಬ್ರಹ್ಮ ಬಂದು ಹೇಳಿದರೂ ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ಕುಟುಂಬ ರಾಜಕಾರಣದ ವಿರುದ್ದ ನನ್ನ ಹೋರಾಟ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ಮಾತ್ರ ಚುನಾವಣೆಯಿಂದ  ಹಿಂದೆ ಸರಿಯುತ್ತೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ಬಿಜೆಪಿಯ ರಾಜ್ಯಾಧ್ಯಕ್ಷ ಬದಲಾವಣೆ ಮಾಡಿದರೆ ನಾನು ನಾಳೆಯೇ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ. ರಾಜ್ಯಾಧ್ಯಕ್ಷ ಬದಲಾವಣೆ ಆದರೆ ನಾನು ಚುನಾವಣೆ ನಿಲ್ಲಲ್ಲ. ನಾಳೆ ರಾತ್ರಿ ದೆಹಲಿಗೆ ಹೋಗ್ತೇನೆ. ನನ್ನ ವಿಚಾರ ಅವರಿಗೆ ಒಪ್ಪಿಸಿ ಬರ್ತೇನೆ. ಅಮಿತ್ ಶಾಗೆ ಗೌರವ ಕೊಟ್ಟು ದೆಹಲಿಗೆ ಹೋಗುತ್ತೇನೆ ಎಂದರು.

ಕುಟುಂಬ ರಾಜಕೀಯದಿಂದ ಕಾರ್ಯಕರ್ತರು ನೊಂದಿದ್ದಾರೆ.   ರಾಜ್ಯಾಧ್ಯಕ್ಷರ ಬದಲಾವಣೆ ಮಾಡಿದ್ರೆ ಮಾತ್ರ ಚುನಾವಣೆಯಿಂದ ವಾಪಸ್ ಆಗುತ್ತೇನೆ. ಇಲ್ಲದಿದ್ದರೇ ಪ್ರಧಾನಿ ಮೋದಿ ಹೇಳಿದರೂ ನಾನು ನಿಲ್ಲುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸುವುದು ಶತಸಿದ್ದ ಎಂದರು.

Key words: BJP-election- KS Eshwarappa