Friday, September 25, 2026

BDA Apartments

Home Front Page ರಾಜ್ಯದಲ್ಲಿ ಬಿಜೆಪಿ ನಶಿಸಿ ಹೋಗಲಿದೆ- ಶಾಸಕ ಲಕ್ಷ್ಮಣ್ ಸವದಿ ಭವಿಷ್ಯ

ರಾಜ್ಯದಲ್ಲಿ ಬಿಜೆಪಿ ನಶಿಸಿ ಹೋಗಲಿದೆ- ಶಾಸಕ ಲಕ್ಷ್ಮಣ್ ಸವದಿ ಭವಿಷ್ಯ

ಹುಬ್ಬಳ್ಳಿ, ನವೆಂಬರ್,7,2024 (www.justkannada.in): ರಾಜ್ಯ ಬಿಜೆಪಿ ಮನೆಯೊಂದು 6 ಬಾಗಿಲು ಆಗಿದೆ. ರಾಜ್ಯದಲ್ಲಿ ಬಿಜೆಪಿ ನಶಿಸಿ ಹೋಗಲಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಬಹಳಷ್ಟು ಜನ ಬರುವವರಿದ್ದಾರೆ. ಅದರೆ ಅವರಿಗೆ ಜಾಗ ಕಲ್ಪಿಸಲು ಕಷ್ಟವಾಗುತ್ತಿದೆ.  ಕ್ಷೇತ್ರ ನೋಡಿಕೊಂಡು ನಾವು ಬಿಜೆಪಿಯವರನ್ನ ಕರೆದದುಕೊಳ್ಳಬೇಕು.  ಬಿಜೆಪಿ ಮನೆಯೊಂದು 6 ಬಾಗಿಲು ಆಗಿದೆ. ರಾಜ್ಯ ಬಿಜೆಪಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಬೀಳುತ್ತೆ ಅಂತಾರೆ.  ಇನ್ನೂ 3 ವರ್ಷ ಅದನ್ನೇ ಹೇಳುತ್ತಾರೆ. ನಂತರ ಮುಂದೆ 5 ವರ್ಷವೂ ಅದನ್ನೇ ಹೇಳುತ್ತಾರೆ ಎಂದು ಲಕ್ಷ್ಮಣ್ ಸವದಿ ಲೇವಡಿ ಮಾಡಿದರು.

Key words: BJP,  destroyed, state, MLA, Laxman Savadi