ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ: ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ- ಸಿಎಂ ಬೊಮ್ಮಾಯಿ.

ಹಾಸನ,ಫೆಬ್ರವರಿ,21,2023(www.justkananda.in): ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ.  ನೂರಕ್ಕೆ ನೂರರಷ್ಟು ಮತ್ತೆ ನಾವೇ  ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆ ಬೇಲೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಘಟಿತವಾಗಿದೆ. ದೇಶಾದ್ಯಂತ ಜೆಪಿ  ನಡ್ಡಾ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿಶ್ವದಲ್ಲಿಯೇ ಬಿಜೆಪಿ ದೊಡ್ಡ ಪಕ್ಷವಾಗಿದೆ. ನಮ್ಮ ಸರ್ಕಾರ ಬೇಲೂರು ಅಭಿವೃದ್ದಿಗೆ ಕಾಣಿಕೆ ಕೊಟ್ಟಿದೆ. ಬಿಎಸ್ ವೈ ಸಿಎಂ ಆಗಿದ್ದಾಗ ನೀರಾವರಿ ಯೋಜನೆ ಆರಂಭಿಸಿದರು. ಬೇಲೂರಿನಲ್ಲಿ ಬದಲಾವಣೆ ತಂದೇ ತರುತ್ತೇವೆ ಎಂದರು.

ಹಾಗೆಯೇ ಕೇಂದ್ರ ಸಚಿವೆ ಶೋಭಾಕರಂಧ್ಲಾಜೆ ಮಾತನಾಡಿ,  ಮನ್ ಮೋಹನ್ ಸಿಂಗ್ ಸರ್ಕಾರ ನೆನಪಟ್ಟುಕೊಳ್ಳುವ ಯಾವುದೇ ಕೆಲಸ ಮಾಡಿಲ್ಲ.  ಮೋದಿ ಸರ್ಕಾರ ಹಳ್ಳಿಯಲ್ಲೂ ನೆನಪಿಟ್ಟುಕೊಳ್ಳುವ ಯೋಜನೆ ಜಾರಿ ಮಾಡಿದೆ. ಕೋವಿಡ್ ವೇಳೆ ಬೇರೆ ದೇಶಗಳಿಗೂ ಲಸಿಕೆ ರಪ್ತು ಮಾಡಿದೆ.  ಕೊರೋನಾ ವಿರುದ್ದ ಹೋರಾಡಿ ಇವತ್ತು ಒಟ್ಟಿಗೆ ಸಮಾವೇಶ ಮಾಡುತ್ತೇವೆ ನಾವು ಇವತ್ತು ಬದುಕ್ಕಿದ್ದರೇ ಮೋದಿ ಕಾರಣ ಎಂದರು.

ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿ ಹಲವು ನಾಯಕರು ಪಾಲ್ಗೊಂಡಿದ್ದಾರೆ.

Key words:  BJP – country –state -We -will come – power – CM Bommai-belur