ಕಾಂಗ್ರೆಸ್ ಕಾರ್ಯಕ್ರಮಗಳನ್ನ ಬಿಜೆಪಿಯವರೇ ಜನರಿಗೆ ತಲುಪಿಸುತ್ತಿದ್ದಾರೆ- ಪ್ರತಿಭಟನೆಗೆ ಡಿ.ಕೆ ಶಿವಕುಮಾರ್ ಟಾಂಗ್.

ಬೆಂಗಳೂರು,ಜುಲೈ,4,2023(www.justkannada.in):  ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವಂತೆ ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಪ್ರತಿಭಟನೆ ನಡೆಸುತ್ತಿರುವ  ಮಾಜಿ ಸಿಎಂ ಬಿಎಸ್ ವೈಗೆ ಒಳ್ಳೆಯದಾಗಲಿ. ಕಾಂಗ್ರೆಸ್ ಕಾರ್ಯಕ್ರಮಗಳನ್ನ ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕ್ರಮಗಳನ್ನ ಬಿಜೆಪಿಯವರು ಜನರಿಗೆ ತಲುಪಿಸುತ್ತಿದ್ದಾರೆ ಬಿಜೆಪಿಯವರು ಒಳಗೆ ಹೊರಗೆ ಪ್ರತಿಭಟನೆ ಮಾಡಲಿ ಎರಡೂ ಕಡೆ ಪ್ರತಿಭಟನೆ ಮಾಡಿದರೇ ಒಳ್ಳೆಯದು ಎಂದು ಲೇವಡಿ ಮಾಡಿದರು.

ಬಿಜೆಪಿ ನಾಯಕರು ಗಾಬರಿಯಾಗುತ್ತಿರುವುದೇಕೆ.. ಬಿಜೆಪಿಗೆ ಜನ ರೆಸ್ಟ್ ಕೊಟ್ಟಿದ್ದಾರೆ ರೆಸ್ಟ್ ತೆಗೆದುಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: BJP –Congress- programs – people –DCM- DK Shivakumar