ಬಿಜೆಪಿಯದ್ದು ಮಹಿಳಾ ಮನ್ನಣೆ ಅಲ್ಲ, ಬಿಎಸ್ ವೈ ಮುಕ್ತ ಬಿಜೆಪಿಯ ಚಿತಾವಣೆ ಅಷ್ಟೇ- ರಾಜ್ಯ ಕಾಂಗ್ರೆಸ್ ಟೀಕೆ.

ಬೆಂಗಳೂರು,ಮೇ,26,2022(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಗೆ ವಿಧಾನಪರಿಷತ್ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನ ಟೀಕಿಸಿ ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿದೆ.

ಯಡಿಯೂರಪ್ಪನವರನ್ನು ಮೂಲೆಗೆ ಎತ್ತಿ ಬಿಸಾಡುವ ತಂತ್ರಗಾರಿಕೆಯ ಬಾಗವಾಗಿರುವ ‘ಪರಿಷತ್ ಟಿಕೆಟ್’ ಕದನ ಬಿಜೆಪಿಯನ್ನು ಸುಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯಡಿಯೂರಪ್ಪನವರನ್ನು ಮೂಲೆಗೆ ಎತ್ತಿ ಬಿಸಾಡುವ ತಂತ್ರಗಾರಿಕೆಯ ಬಾಗವಾಗಿರುವ ‘ಪರಿಷತ್ ಟಿಕೆಟ್’ ಕದನ ಬಿಜೆಪಿಯನ್ನು ಸುಡುತ್ತಿದೆ ಬಿಜೆಪಿಯದ್ದು ಮಹಿಳಾ ಮನ್ನಣೆ ಅಲ್ಲ, ಬಿಎಸ್ ವೈ ಮುಕ್ತ ಬಿಜೆಪಿಯ ಚಿತಾವಣೆ ಅಷ್ಟೇ. ‘ಜೀ’ ಹುಜೂರ್ ಎನ್ನುತ್ತಿರುವ ರಾಜ್ಯ ಬಿಜೆಪಿ, ಯಡಿಯೂರಪ್ಪನವರನ್ನು ‘ದುರಂತ ನಾಯಕ’ನನ್ನಾಗಿಸಿದೆ ಎಂದು ಲೇವಡಿ ಮಾಡಿದೆ.

ಬಿಜೆಪಿಯ ಅಸಲಿ ಹಿಂದೂ ವಿರೋಧಿ ಧೋರಣೆ ಬಯಲಾಗಿದೆ. ರಾಜಕೀಯ ಕುಹಕಗಳಿಗೆ ಹಿಂದೂ ದೇವತೆಗಳನ್ನು ಬಳಸಿಕೊಂಡಿದ್ದಾರೆ. ರಾಜ್ಯದ ಜನರ ಮುಂದೆ ಕಟೀಲು ಮಂಡಿಯೂರಿ ಕ್ಷಮೆ ಕೇಳಬೇಕು. ಧಾರ್ಮಿಕತೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಲ್ಲದೆ, ದೇವತೆಗಳ ಹೆಸರಲ್ಲಿ ಕೀಳು ಟೀಕೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

Key words: BJP -Congress –criticism-tweet war