Friday, August 21, 2026

BDA Apartments

Home Front Page ಕ್ಯಾಂಡಿಡೇಟ್ ಆಯ್ಕೆ ಮಾಡಲಾಗದೆ ಬಿಜೆಪಿ ಅಭ್ಯರ್ಥಿ ಹೈಜಾಕ್ ಮಾಡಿದ್ರು- ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್

ಕ್ಯಾಂಡಿಡೇಟ್ ಆಯ್ಕೆ ಮಾಡಲಾಗದೆ ಬಿಜೆಪಿ ಅಭ್ಯರ್ಥಿ ಹೈಜಾಕ್ ಮಾಡಿದ್ರು- ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್

ಬೆಂಗಳೂರು,ಅಕ್ಟೋಬರ್,26,2024 (www.justkannada.in): ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಇವರಿಗೆ ಅಭ್ಯರ್ಥಿಯ ಆಯ್ಕೆ ಮಾಡಲು ಆಗಲಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕಾಂಗ್ರೆಸ್ ನವರು  ಬಿಜೆಪಿಯಿಂದ ಅಭ್ಯರ್ಥಿ ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ  ಇಷ್ಟಾದರೂ ಬೇರೆ ಕುತಂತ್ರ ಮಾಡುತ್ತಿದ್ದಾರೆ ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ನನ್ನ ಕೆಲಸದ ಆಧಾರದಲ್ಲಿ ಮತ ಕೇಳುತ್ತೇನೆ ಎಂದರು.

ಹೆಚ್ ಡಿಕೆ ಭಾವನಾತ್ಮಕವಾಗಿ ಮಾತನಾಡ್ತಾರೆ.  ಜನರ ಮುಂದೆ ಸುಮ್ಮನೆ  ಕಣ್ಣೀರು  ಹಾಕ್ತಾರೆ ಎಂದು ಹೇಳುತ್ತಾರೆ.  ಪಾಪ ಇವರು ಯಾವತ್ತೂ ಜನರ ಮುಂದೆ ಕಣ್ಣೀರೇ ಹಾಕಿಲ್ವಾ..?  ಹೌದು ನಾನು ಜನರ ಕಷ್ಟ ನೋಡಿ ಬಹಳ ಕಣ್ಣೀರು ಹಾಕಿದ್ದೇನೆ.   ಇವರ ನಡವಳಿಕೆ ಕಣ್ಣಲ್ಲಿ ನೀರು ತರಿಸುವ ರೀತಿ ಇದೆ ಎಂದು ಹೆಚ್ ಡಿಕೆ ಟೀಕಿಸಿದರು.

Key words: BJP, candidate, hijacked, congress, HDK