ಬಿಜೆಪಿ ಸುಳ್ಳಿನ ಮೇಲೆ ಪ್ರಚಾರ, ನಾವು ಸತ್ಯದ ಮೇಲೆ ಪ್ರಚಾರ- ಸಿಎಂ ಸಿದ್ದರಾಮಯ್ಯ.

ಬೆಂಗಳೂರು,ಏಪ್ರಿಲ್,6, 2024 (www.justkannada.in): ಬಿಜೆಪಿ ಸುಳ್ಳಿನ ಮೇಲೆ ಪ್ರಚಾರ ಮಾಡಿದರೇ, ನಾವು ಸತ್ಯದ ಮೇಲೆ ಪ್ರಚಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೈಸೂರಿನಲ್ಲಿ ನಾನು 3 ದಿನ ಇದ್ದೆ ಚಿತ್ರದುರ್ಗಕ್ಕೂ ಹೋಗಿದ್ದೆ. ಕೋಲಾರ ಜಿಲ್ಲೆಯಲ್ಲಿ ಇವತ್ತು ಅಧಿಕೃತ ಪ್ರಚಾರ ಆರಂಭ ಮಾಡುತ್ತೇವೆ ಎಂದರು.

ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ ಮುಳುಬಾಗಿಲಿನಿಂದ ಪ್ರಚಾರ ಆರಂಭಿಸುತ್ತೇವೆ. ಬಿಜೆಪಿ ಸುಳ್ಳಿನ ಮೇಲೆ  ಪ್ರಚಾರ  ಮಾಡಿದರೇ  ನಾವು ಸತ್ಯದ ಮೇಲೆ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.

Key words: BJP, campaigns, lies, Siddaramaiah