Tuesday, September 22, 2026

BDA Apartments

ಬಿಜೆಪಿಯವರಿಗೆ ಪ್ರಚಾರ ಮಾಡಲು ಏನು ಇಲ್ಲ: ಅವರು ಮಾಡಿರುವ ಆರೋಪ ಸುಳ್ಳು- ಸಿಎಂ ...
Home Front Page ಬಿಜೆಪಿಯವರಿಗೆ ಪ್ರಚಾರ ಮಾಡಲು ಏನು ಇಲ್ಲ: ಅವರು ಮಾಡಿರುವ ಆರೋಪ ಸುಳ್ಳು-  ಸಿಎಂ ಸಿದ್ಧರಾಮಯ್ಯ

ಬಿಜೆಪಿಯವರಿಗೆ ಪ್ರಚಾರ ಮಾಡಲು ಏನು ಇಲ್ಲ: ಅವರು ಮಾಡಿರುವ ಆರೋಪ ಸುಳ್ಳು-  ಸಿಎಂ ಸಿದ್ಧರಾಮಯ್ಯ

ಬೆಳಗಾವಿ,ಆಗಸ್ಟ್,11,2023(www.justkannada.in): ಬಿಜೆಪಿಯವರಿಗೆ ಪ್ರಚಾರ ಮಾಡಲು ಏನು ಇಲ್ಲ. ಹೀಗಾಗಿ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಮೂರು ವರ್ಷ ಅವರು ಬಿಲ್‌ ಕೊಟ್ಟಿಲ್ಲ. ಸುಮ್ಮನೆ ಇರದವರು ಮೈ ಪರಚಿಕೊಂಡರಂತೆ. ಬಿಜೆಪಿಯವರಿಗೆ ಹೊಟ್ಟೆಯುರಿ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದ ವಿರುದ್ದ ಕಮಿಷನ್ ಆರೋಪ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ‍್ಧರಾಮಯ್ಯ, ನಾವು ಕಮಿಷನ್ ಹಿಂದೆ ಬಿದ್ದವರಲ್ಲ. ಕಮಿಷನ್ ಹಗರಣಗಳ ಹಿಂದಿರುವ ಭ್ರಷ್ಟರ ಬೆನ್ನು ಬಿದ್ದಿದ್ದೇವೆ. ಈಗಾಗಲೇ ಗುತ್ತಿಗೆದಾರರು ಬಾಕಿ ಬಿಲ್​ ಕುರಿತು ಚರ್ಚಿಸಿದ್ದಾರೆ. P.O.W ಕಾಮಗಾರಿಗಳ ಬಿಲ್ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಕೆಲವು ಪ್ರಕ್ರಿಯೆ ಮುಗಿದ ಕೂಡಲೆ ಹಣ ಬಿಡುಗಡೆ ಮಾಡುತ್ತೇವೆ. ಕೆಲವು ಗುತ್ತಿಗೆದಾರರು ಸ್ವಾರ್ಥ, ದುರುದ್ದೇಶಕ್ಕೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

Key words: BJP – Allegations – false – CM- Siddaramaiah