ಬಿಟ್ ಕಾಯಿನ್ ಪ್ರಕರಣ: ಆರೋಪಿ ಶ್ರೀಕಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್

ಬೆಂಗಳೂರು, ಜುಲೈ, 3,2024 (www.justkannada.in): ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಶ್ರೀಕಿ ಮೇಲಿನ ಸಂಘಟಿತ ಅಪರಾಧಗಳ ಕಾಯ್ದೆಯನ್ನು ರದ್ದುಪಡಿಸಿದೆ.

ಇಂದು ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಅರ್ಜಿಯ ವಿಚಾರಣೆ ನಡೆಸಿದರು. ಈ ವೇಳೆ ಶ್ರೀಕಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು,  ಶ್ರೀಕೃಷ್ಣ ವಿರುದ್ಧ ಸಂಘಟಿತ ಅಪರಾಧಗಳ ಕಾಯ್ದೆ ಅನ್ವಯವಾಗದೇ ಇದ್ದರೂ ಜಾಮೀನು ಸಿಗಬಾರದು ಅಂತ ದಾಖಲಿಸಿದ್ದಾರೆ ಪೊಲೀಸರು ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಕೇಸ್ ​ಗೂ ಮುಂಚಿನ ವರ್ಷಗಳಲ್ಲಿ ಎರಡು ಆರೋಪ ಪಟ್ಟಿಯಿದ್ದು, ಕಾಗ್ನಿಜೆನ್ಸ್ ನಿಯಮ ಪಾಲಿಸಿಲ್ಲ. ಜೊತೆಗೆ ಸಂಘಟಿತ ಅಪರಾಧ‌ ಕಾಯ್ದೆ ಹೇಗೆ ಅನ್ವಯವೆಂದು ಪೊಲೀಸರು ಉಲ್ಲೇಖಿಸಿಲ್ಲ. ಹೀಗಾಗಿ ಸಂಘಟಿತ ಅಪರಾಧ ಕಾಯ್ದೆ ಅಂಶಗಳು ಇಲ್ಲಿ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಆದೇಶಿಸಿದೆ.

ಸಂಘಟಿತ ಅಪರಾಧ ಕಾಯ್ದೆ ಅನ್ವಯಿಸಿದ್ದನ್ನು ರದ್ದುಪಡಿಸಿದ ಹೈಕೋರ್ಟ್ ವ್ಯಾಪ್ತಿಯಿರುವ ನ್ಯಾಯಾಲಯ ಶೀಘ್ರ ಜಾಮೀನು ಅರ್ಜಿ ತೀರ್ಮಾನಿಸಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.

Key words: Bitcoin, case,  High Court, accused, Shriki