ಬಿಟ್ ಕಾಯಿನ್ ಆರೋಪಿಗೆ ಅಷ್ಟು ಸುಲಭವಾಗಿ ಜಾಮೀನು ಸಿಕ್ಕಿದ್ದೇಗೆ ಗೊತ್ತಾಗಲಿ- ಹೆಚ್.ಡಿ ಕುಮಾರಸ್ವಾಮಿ ಒತ್ತಾಯ.

ಬೆಂಗಳೂರು,ನವೆಂಬರ್ 11,2021(www.justkannada.in): ಬಿಟ್ ಕಾಯಿನ್ ದಂಧೆ ಪ್ರಕರಣದಲ್ಲಿ ಈಗಾಗಲೇ ಹ್ಯಾಕರ್ ಶ್ರೀಕೃಷ್ಣನಿಗೆ ಜಾಮೀನು ಸಿಕ್ಕಿದ್ದು ಬಿಡುಗಡೆ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ಮುಂದುವರೆದಿದೆ. ಈ ಮಧ್ಯೆ ಬಿಟ್ ಕಾಯಿನ್ ಆರೋಪಿಗೆ ಅಷ್ಟು ಸುಲಭವಾಗಿ ಜಾಮೀನು ಸಿಕ್ಕಿದ್ದೇಗೆ..? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಟ್ ಕಾಯಿನ್ ಆರೋಗಿಗೆ ಜಾಮೀನು ಕೊಡಲು ಶ್ಯೂರಿಟಿ ನೀಡಿದ್ದು ಯಾರು. ಸರ್ಕಾರಿ ಅಭಿಯೋಜಕ ಹೇಗೆ ವಾದ ಮಾಡಿದರು.  ಅಷ್ಟು ಸುಲಭವಾಗಿ ಹೇಗೆ ಜಾಮೀನು ಸಿಕ್ಕತು ಎಂಬುದು ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಬಿಟ್ ಕಾಯಿನ್ ವಿಚಾರದಲ್ಲಿ ಕೆಲವರ ಹೆಸರು ಕೇಳಿ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೆಚ್.ಡಿಕೆ ಅನುಮಾನ ವ್ಯಕ್ತಪಡಿಸಿದರು.

ಜನ್ ದನ್ ಖಾತೆಯಿಂದ ಸಾವಿರಾರು ಕೋಟಿ ಕಳವು ಶಂಕೆ ವ್ಯಕ್ತವಾಗಿದೆ. 1,2 ರೂ  ಕದ್ದಿದ್ದಾರೇಂಬ ಮಾಹಿತಿ ಇದೆ.  ಇದರಲ್ಲಿ ಎರಡು ಪಕ್ಷದವರು ಶಾಮೀಲಾಗಿರಬಹುದು ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.

Key words: Bitcoin- accused -how -easily – got- bail-former CM-HD Kumaraswamy