ಬಿಟ್ ಕಾಯಿನ್ ಪ್ರಕರಣ: ನನ್ನ ಪಾತ್ರ ಇದ್ದಿದ್ದರೆ ಇಷ್ಟು ದಿನ ಸುಮ್ಮನೆ ಎಂದ ನಲಪಾಡ್

ಬೆಂಗಳೂರು, ನವೆಂಬರ್ 14, 2021 (www.justkannada.in): 2021ರ ಜನವರಿಯಲ್ಲಿ ಬಿಟ್ ಕಾಯಿನ್ ಪ್ರಕರಣ ಬಯಲಿಗೆ ಬಂದಿದೆ. ನನ್ನ ಪಾತ್ರ ಇದ್ದಿದ್ದರೆ ಇಷ್ಟು ದಿನ ಸುಮ್ಮನೆ ಬಿಡುತ್ತಿದ್ದರಾ? ಎಂದು ಯುವ ಮುಖಂಡ ಮೊಹಮ್ಮದ್ ನಲಪಾಡ್ ಪ್ರಶ್ನಿಸಿದ್ದಾರೆ.

ಬಿಟ್ ಕಾಯಿನ್ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಅನಗತ್ಯವಾಗಿ ನನ್ನ ಹೆಸರನ್ನು ಪ್ರಸ್ತಾಪಿಸಿ ಮಾನಸಿಕ ಕಿರುಕುಳ ನೀಡಬೇಡಿ ಎಂದು ನಲಪಾಡ್ ಮನವಿ ಮಾಡಿದ್ದಾರೆ.

ಪ್ರಭಾವ ಬೀರಿ ತಪ್ಪಿಸಿಕೊಳ್ಳಲು ನಮ್ಮ ಪಕ್ಷ ಅಧಿಕಾರದಲ್ಲಿ ಇದ್ಯಾ. ನಮ್ಮ ತಂದೆ ಸಚಿವರಾಗಿದ್ದಾರಾ? ನನ್ನ ಏಳಿಗೆ ಸಹಿಸಲಾಗದ ನಮ್ಮ ಪಕ್ಷದವರು ಅಥವಾ ಹೊರಗಿನ ಯಾರೋ ನನ್ನ ವಿರುದ್ಧ ಪಿತ್ತೂರಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮಕ್ಕಳು ತಪ್ಪು ಮಾಡಿಲ್ವಾ. ನಿಮ್ಮ ಮಕ್ಕಳು ತಪ್ಪು ಮಾಡಿದಾಗ ಹೀಗೆ ತೊಂದರೆ ಕೊಡುತ್ತಿದ್ರಾ ಎಂದು ಯು.ಬಿ.ಸಿಟಿ ಪಬ್‍ನಲ್ಲಿ ನಡೆದ ಗಲಾಟೆ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ತಮ್ಮ ವಿರೋಧಿಗಳ ಕುರಿತು ವಾಗ್ದಾಳಿ ನಡೆಸಿದ್ದಾರೆ.