ಬಿಪಿನ್ ರಾವತ್ ನಿಧನ: ಹೊಸ ಸಿಡಿಎಸ್ ನೇಮಕ ಪ್ರಕ್ರಿಯೆ ಆರಂಭಿಸಿದ ಮೋದಿ ಸರಕಾರ

ಬೆಂಗಳೂರು, ಡಿಸೆಂಬರ್ 10, 2021 (www.justkannada.in): ಜನರಲ್ ರಾವತ್ ಅಗಲಿಕೆಯಿಂದ ಪ್ರಮುಖ ಹುದ್ದೆಯಾದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಸ್ಥಾನ ಖಾಲಿಯಾಗಿದೆ.

ವರದಿಗಳ ಪ್ರಕಾರ ಮುಂದಿನ ಏಳರಿಂದ ಹತ್ತು ದಿನಗಳಲ್ಲಿ ಹೊಸ ಸಿಡಿಎಸ್ ನೇಮಕ ಮಾಡಲು ಮೋದಿ ಸರ್ಕಾರ ಮುಂದಾಗಿದ್ದು, ಆರಂಭಿಕ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಜನರಲ್ ಬಿಪಿನ್ ರಾವತ್ ಅವರ ನಿಧನದೊಂದಿಗೆ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಈಗ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿದ್ದಾರೆ.

ಆರ್ಮಿ ವೈಸ್ ಚೀಫ್ ಲೆಫ್ಟಿನೆಂಟ್ ಜನರಲ್ ಸಿಪಿ ಮೊಹಂತಿ ಮತ್ತು ಉತ್ತರ ಸೇನೆಯ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರು ನಂತರದ ಸ್ಥಾನದಲ್ಲಿದ್ದಾರೆ.

ಭೂ, ವಾಯು, ನೌಕಾಪಡೆ ಜೊತೆ ಸಮನ್ವಯ ಸಾಧಿಸಬಲ್ಲ ಹಾಗೂ ಮೂರು ಪಡೆಗಳಿಗೂ ಸಮ್ಮತವಾಗಬಲ್ಲ ಆಯ್ಕೆಯನ್ನು ಮೋದಿ ಸರ್ಕಾರ ಘೋಷಿಸಬೇಕಿದೆ.