Sunday, October 18, 2026

Dasara Wishes

Happy Dasara
Home Front Page ಬಿಳಿಗಿರಿರಂಗನ ಬೆಟ್ಟದ ಚಿಕ್ಕ ಜಾತ್ರಾ ಮಹೋತ್ಸವ: ದ್ವಿಚಕ್ರ ವಾಹನಗಳಿಗೆ ನಿರ್ಬಂಧ.

ಬಿಳಿಗಿರಿರಂಗನ ಬೆಟ್ಟದ ಚಿಕ್ಕ ಜಾತ್ರಾ ಮಹೋತ್ಸವ: ದ್ವಿಚಕ್ರ ವಾಹನಗಳಿಗೆ ನಿರ್ಬಂಧ.

ಯಳಂದೂರು,ಜನವರಿ,12,2024(www.justkannada.in): ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15 ರಂದು  ಬಿಳಿಗಿರಿರಂಗನ ಬೆಟ್ಟದ ಚಿಕ್ಕ ಜಾತ್ರಾ ಮಹೋತ್ಸವ ನಡೆಯಲಿದ್ದು,  ದ್ವಿಚಕ್ರ ವಾಹನಗಳಿಗೆ  ನಿರ್ಬಂಧ ವಿಧಿಸಲಾಗಿದೆ.

ಜಾತ್ರಾ ಮಹೋತ್ಸವಕ್ಕೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ, ಅಪಘಾತ ತಡೆ ಸುಗಮ ವಾಹನ ಸಂಚಾರಕ್ಕಾಗಿ ದ್ವಿಚಕ್ರ ವಾಹನಗಳಿಗೆ ‌ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ಜನವರಿ 15  ಮತ್ತು 16 ರಂದು ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಆದೇಶ ಹೊರಡಿಸಿದ್ದಾರೆ. ದಟ್ಟ ಅರಣ್ಯ ಪ್ರದೇಶ, ರಸ್ತೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಹಿನ್ನೆಲೆ. ಯಾವುದೇ ಅಪಘಾತ ಪ್ರಕರಣಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧ ವಿಧಿಸಲಾಗಿದೆ.

Key words: Biligirirangana Hill- Chikka Jatra- Mahotsava-Restricted – two-wheelers.