ಚಾಮರಾಜನಗರ ,ಮೇ,9,2025 (www.justkannada.in): ನಾಳೆ ಬಿಳಿಗಿರಿರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಹಿನ್ನಲೆ, ಇಂದು, ನಾಳೆ ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ದ್ವಿಚಕ್ರ ವಾಹನಗಳನ್ನ ನಿಷೇಧಿಸಲಾಗಿದೆ.
ನಾಳೆ ದೊಡ್ಡ ಜಾತ್ರೆ ಪ್ರಯುಕ್ತ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಬರುವ ಸಾಧ್ಯತೆ ಇದ್ದು ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಲಿದೆ. ರಸ್ತೆಯು ಕಡಿದಾದ ತಿರುವುಗಳಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ.
ವಾಹನಗಳ ದಟ್ಟಣೆ ನಿಯಂತ್ರಣ ಮಾಡುವ ಸಲುವಾಗಿ ದ್ವಿಚಕ್ರ ವಾಹಗಳಿಗೆ ಎರಡು ದಿನಗಳ ಕಾಲ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪನಾಗ್ ಆದೇಶ ಹೊರಡಿಸಿದ್ದಾರೆ. ಯಳಂದೂರು, ಹೊಂಡರಬಾಳು ಎರಡು ಕಡೆಯಿಂದ ಹೋಗುವ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ನಿಷೇಧ ಹೇರಲಾಗಿದೆ.
key words: Two-wheeler, ban, Biligirirangana Hill, today, tomorrow.