ಬೆಂಗಳೂರು,ನವೆಂಬರ್,12,2025 (www.justkannada.in): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿ ಸಂಸದ ಕೆ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಕೆ.ಸುಧಾಕರ್, ದೇಶದಲ್ಲಿ ಪ್ರಧಾನಿಇ ಮೋದಿಯವರ ಜನಪ್ರಿಯತೆ ಹೆಚ್ಚಾಗಿದೆ. ಜನಪ್ರಿಯತೆ ಹೆಚ್ಚಾಗಿದ್ದಕ್ಕೆ ಈ ರೀತಿ ಫಲಿತಾಂಶ ಬರುತ್ತಿದೆ. ಕಾಂಗ್ರೆಸ್ ಗೆದ್ದರೆ ಪ್ರಜಾಪ್ರಭುತ್ವ ಗೆದ್ದಂತ ಅಂತಾರೆ ಸೋತರೆ ಪ್ರಜಾಪ್ರಭುತ್ವ ಸೋಲು ಅಂತಾರೆ ಸೋಲುವ ಭೀತಿಯಿಂದ ವೋಟ್ ಚೋರಿ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷದಲ್ಲಿ ಎರಡುವರೆ ಲಕ್ಷ ಕೋಟಿ ಸಾಲ ಮಾಡಿದೆ. ಒಟ್ಟಾರೆ ರಾಜ್ಯದ ಸಾಲ ಎಂಟು ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ಸಾಲ ತೀರಿಸುವುದು ಯಾವಾಗ? ಬಡ್ಡಿ ನಿರ್ವಹಣೆ ಹೇಗೆ? ನಾವು ಅಧಿಕಾರಕ್ಕೆ ಬಂದರೂ ನಿರ್ವಹಣೆ ಕಷ್ಟ. ಗ್ಯಾರಂಟಿಗಳಿಂದಲೂ ಆರ್ಥಿಕ ಹೊರೆ ಆಗುತ್ತಿದೆ. ಕಾಂಗ್ರೆಸ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ಅಧಿಕಾರ ಹಂಚಿಕೆ ಆಗಿದ್ದರೇ ಸೌರ್ಹಾರ್ದಯುತವಾಗಿ ನಿರ್ಧಾರ ತೆಗೆದುಕೊಳ್ಳಿ. ಗೊಂದಲ ಅನಗತ್ಯ ಮಾತಿಗೆ ನಡೆದುಕೊಳ್ಳವವನೇ ನಾಯಕ ಎಂದು ಸಂಸದ ಸುಧಾಕರ್ ಹೇಳಿದರು.
Key words: NDA, 140 seats, Bihar Election, MP Sudhakar







