ನಾಳೆಯಿಂದ ಮತ್ತೆ ಶುರು ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್

ಬೆಂಗಳೂರು, ಜೂನ್ 22 (www.justkannada.in): ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತಿದ್ದ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್ ಬಾಸ್ 8ನೇ ಸೀಸನ್ ಬುಧವಾರದಿಂದ ಮತ್ತೆ ಆರಂಭವಾಗಲಿದೆ.

ಬುಧವಾರದಿಂದ ಸೀಸನ್ 8ರ ಎರಡನೇ ಇನ್ನಿಂಗ್ಸ್ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಸಂಬಂಧ ಕಲರ್ಸ್ ವಾಹಿನಿಯವರು ಕಾರ್ಯಕ್ರಮದ ಹೊಸ ಪ್ರೊಮೊ ರಿಲೀಸ್ ಮಾಡಿದ್ದಾರೆ.

ಈ ಹಿಂದೆ ಇದ್ದ 12 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಆಟ ಆಡಲಿದ್ದಾರೆ. ಇನ್ನು, ಈ ಬಾರಿಯ ಬಿಗ್ ಬಾಸ್ ಸೀಸನ್ 8ರಲ್ಲಿ ಸಖತ್ ಟ್ವಿಸ್ಟ್ ಗಳಿರಲಿವೆಯಂತೆ. ಈ ಮೂಲಕ ಸಿನಿಮಾ- ಬಿಗ್ ಬಾಸ್ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ.