ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್: ಗೃಹಿಣಿಯರಿಗೆ ಸಹಾಯ ಧನ, ವಿದ್ಯಾರ್ಥಿನಿಯರಿಗೆ ಫ್ರಿ ಬಸ್ ಪಾಸ್.

ಬೆಂಗಳೂರು,ಫೆಬ್ರವರಿ,17,2023(www.justkannada.in): ರಾಜ್ಯ ಬಜೆಟ್ ನಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲಾಗಿದ್ದು,  ಗೃಹಿಣಿಯರಿಗೆ ಸಹಾಯ ಧನ, ವಿದ್ಯಾರ್ಥಿನಿಯರಿಗೆ ಫ್ರಿ ಬಸ್ ಪಾಸ್ ಘೋಷಣೆ ಮಾಡಲಾಗಿದೆ.

ವಿಧಾನಸಭೆಯಲ್ಲಿ ಇಂದು ಸರ್ಕಾರದ ಕೊನೆಯ ಬಜೆಟ್ ಮಂಡನೆ ಮಾಡುತ್ತಾ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಗೃಹಿಣಿಶಕ್ತಿ ಯೋಜನೆ ಜಾರಿ ಮಾಡಲಾಗುತ್ತಿದೆ. ಮಹಿಳೆಯರಿಗೆ ತಿಂಗಳಿಗೆ 500 ರೂ ಸಹಾಯಧನ ಹಾಗೂ ವಿದ್ಯಾರ್ಥಿನೀಯರಿಗೆ ಉಚಿತ ಬಸ್ ಪಾಸ್ 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

ಸುಮಾರು 350 ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದಿದ್ದಾರೆ.

Key words: Big gift – women -state budget-Subsidy –free- bus pass