Thursday, September 24, 2026

BDA Apartments

Home Front Page ಬಿಡದಿ ಟೌನ್ ಶಿಪ್ ಗೆ ವಿರೋಧ: ಜೂ.27 ರಂದು ಅಪ್ಪಿಕೋ ಚಳವಳಿಗೆ ಮುಂದಾದ ರೈತರು

ಬಿಡದಿ ಟೌನ್ ಶಿಪ್ ಗೆ ವಿರೋಧ: ಜೂ.27 ರಂದು ಅಪ್ಪಿಕೋ ಚಳವಳಿಗೆ ಮುಂದಾದ ರೈತರು

ರಾಮನಗರ,ಜೂನ್,25,2026 (www.justkannada.in): ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಹೊರಟಿರುವ ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರ ಪ್ರತಿಭಟನೆ ಮುಂದುವರೆದಿದ್ದು ಜೂನ್ 27 ರಂದು ಅಪ್ಪಿಕೋ ಚಳವಳಿಗೆ ಮುಂದಾಗಿದ್ದಾರೆ.

ಬಿಡದಿ ಟೌನ್ ಶಿಪ್ ವಿರೋಧಿಸಿ ರಾಮನಗರ ತಾಲ್ಲೂಕಿನ ಬನ್ನಿಗಿರಿ ಗ್ರಾಮದ ಬಳಿ  ರೈತರು ಅಪ್ಪಿಕೋ ಚಳವಳಿ ನಡೆಸಲು ಯೋಚಿಸಿದ್ದಾರೆ.   ನಮ್ಮ ಭೂಮಿ ನಮ್ಮ ಹಕ್ಕು, 10 ಲಕ್ಷ ಮರಗಳನ್ನ ಉಳಿಸಿ ಎಂದು ಹೋರಾಟ ಮಾಡಲು ರೈತರು ಮುಂದಾಗಿದ್ದಾರೆ.   ಬಿಡದಿ ಟೌನ್ ಶಿಪ್ ವ್ಯಾಪ್ತಿಯಲ್ಲಿ ಲಕ್ಷಾಂತರ ಮರಗಳಿದ್ದು ಈ ಹಿನ್ನೆಲೆಯಲ್ಲಿ ಅವುಗಳನ್ನ ಉಳಿಸಲು ರೈತರು ಪ್ರತಿಭಟನೆಗಿಳಿದಿದ್ದಾರೆ.ಬಿಡದಿ ಟೌನ್ ಶಿಪ್ ಗೆ ವಿರೋಧ: ಜೂ.27 ರಂದು ಅಪ್ಪಿಕೋ ಚಳವಳಿಗೆ ಮುಂದಾದ ರೈತರು bidadi

ಬಿಡದಿ ಟೌನ್ ಶಿಪ್ ವಿರೋಧಿಸಿ ಜೆಡಿಎಸ್ ಸಹ ರೈತರ ಪ್ರತಿಭಟನೆಗೆ ಕೈಜೋಡಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿಕೆ ನಡುವೆ ಜಟಾಪಟಿ ನಡೆದಿತ್ತು.ಬಿಡದಿ ಟೌನ್ ಶಿಪ್ ಗೆ ವಿರೋಧ jk02_new jk02 new

Key words: Opposition, Bidadi Township,  Farmers, protest