Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Crime ಅಧಿಕಾರಿಗಳಿಗೆ ಪೊರಕೆ ಸೇವೆ, ಹಲ್ಲೆ : ಮಹಿಳೆಯರು ಸೇರಿ 10ಕ್ಕೂ ಹೆಚ್ಚು ರೈತರ ವಿರುದ್ದ ಕೇಸ್

ಅಧಿಕಾರಿಗಳಿಗೆ ಪೊರಕೆ ಸೇವೆ, ಹಲ್ಲೆ : ಮಹಿಳೆಯರು ಸೇರಿ 10ಕ್ಕೂ ಹೆಚ್ಚು ರೈತರ ವಿರುದ್ದ ಕೇಸ್

ರಾಮನಗರ,ಜುಲೈ14,2026 (www.justkannada.in):  ಬಿಡದಿ ಟೌನ್ ಶಿಪ್  ಸರ್ವೇಗಾಗಿ ತೆರಳಿದ್ದ ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿ ಕಾರಿಗೆ ಕಲ್ಲಿನಿಂದ  ಹೊಡೆದು ಗಲಾಟೆ ಮಾಡಿದ ಸಂಬಂಧ ಮೂವರು ಮಹಿಳೆಯರು ಸೇರಿ 10ಕ್ಕೂ ಹೆಚ್ಚು ರೈತರ ವಿರುದ್ದ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ವೇ ಮಾಡಲು ಬಂದಿದ್ದ ಅಧಿಕಾರಿಳಿಗೆ ಪೊರಕೆ ಸೇವೆ ಮಾಡಿದ್ದ ಜಯಮ್ಮ, ಭಾಗ್ಯ,  ವರಲಕ್ಷ್ಮಿ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಮುರುಳಿ ಕೊಟ್ಟ ದೂರಿನ ಮೇಲೆ 10ಕ್ಕೂ ಹೆಚ್ಚು ರೈತರ ಮೇಲೆ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ಜೀವಬೆದರಿಕೆ ಹಾಕಿ ರೈತರಿಂದ ಹಲ್ಲೆ ಎಂದು  ಪ್ರಕರಣ ದಾಖಲಾಗಿದೆ.  ನಿನ್ನೆ ರಾಮನಗರದ  ಮಂಡಲಹಳ್ಳಿಯಲ್ಲಿ  ರೈತರು ಮಹಿಳೆಯರು ಸರ್ವೇ ಮಾಡಲು ಬಂದಿದ್ದ  ಅಧಿಕಾರಿಗಳಿಗೆ ಕಾರಿಗೆ ಪೊರಕೆಯಿಂದ ಹೊಡೆದಿದ್ದರು. ಅಲ್ಲದೆ ಇಟ್ಟಿಗೆ ಕಲ್ಲುಗಳಿಂದಲೂ ದಾಳಿ ನಡೆಸಿದ್ದರು.ಅಧಿಕಾರಿಗಳಿಗೆ ಪೊರಕೆ ಸೇವೆ jk02_new jk02 new

Key words: Bidadi town ship, Case, against , 10 farmers