ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ : ಬಿಜೆಪಿ ಕಚೇರಿ ಮುಂಭಾಗ ಹಾಕಿದ್ಧ ಫ್ಲೆಕ್ಸ್ ತೆರವು….

ಮೈಸೂರು.ಆ,5,2020(www.justkannada.in): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.

ಇಂದು ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲನ್ಯಾಸ ನೆರವೇರಿಸಲಿದ್ದು ಈ ಹಿನ್ನೆಲೆ ಬಿಜೆಪಿ ಕಚೇರಿ ಮುಂಭಾಗ ಫ್ಲೆಕ್ಸ್ ಹಾಕಲಾಗಿತ್ತು.  ಆದರೆ ಮೈಸೂರು ನಗರದಲ್ಲಿ ಸಂಭ್ರಮಾಚರಣೆಗೆ ಕೋಕ್ ನೀಡಲಾಗಿದೆ. ಹೀಗಾಗಿ ನಗರದ ಬಿಜೆಪಿ ಕಚೇರಿ ಮುಂಭಾಗ ಹಾಕಲಾಗಿದ್ದ  ಫ್ಲೆಕ್ಸ್ ತೆರವು ಮಾಡುವಂತೆ  ಲಕ್ಷ್ಮಿಪುರಂ ಪೋಲಿಸರು ಸೂಚನೆ ನೀಡಿದರು.bhoomi-pooja-construction-ram-mandir-mysore-bjp-office-flexನಗರದಲ್ಲಿ ನಿಷೇದಾಜ್ಞೆ ಇದೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು. ಕೊರೋನಾ ಹಾಗೂ ನಿಷೇಧಾಜ್ಞೆ ಹಿನ್ನೆಲೆ ಇಂದು ಬಿಜೆಪಿಯ ಪೂರ್ವಯೋಜನೆಗಳಿಗೆ ತಡೆ ನೀಡಲಾಗಿದೆ. ಬಿಜೆಪಿ ಇಂದು  ಬೃಹತ್ ಎಲ್‌ಇಡಿ ಪರದೆ,  ಪೂಜೆ, ರಾಮಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ನಿಷೇಧಾಜ್ಞೆ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಪೂಜೆ ಕಾರ್ಯಕ್ರಮ ಎಲ್ ಇಡಿ ಅಳವಡಿಕೆಗೆ ಅಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ ಎಲ್ಲಾ ಕಾರ್ಯಕ್ರಮಗಳನ್ನೂ ರದ್ಧು ಮಾಡಲಾಗಿದೆ.

Key words: Bhoomi Pooja – construction -Ram Mandir-mysore-BJP office – Flex