ಬಳ್ಳಾರಿಯಲ್ಲಿ ಇಂದು ಭಾರತ್ ಜೋಡೋ ಯಾತ್ರೆ: ಪೊಲೀಸ್ ಬಿಗಿ ಭದ್ರತೆ.

ಬಳ್ಳಾರಿ,ಅಕ್ಟೋಬರ್ ,15,2022(www.justkannada.in):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ  ಇಂದು ಬಳ್ಳಾರಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ವಹಿಸಲಾಗಿದೆ.

ಪಾದಯಾತ್ರೆ ಬಳಿಕ ಬಳ್ಳಾರಿಯಲ್ಲಿ ಸಮಾವೇಶ ನಡೆಯಲಿದ್ದು, ಬಿಗಿ ಭದ್ರತೆಗಾಗಿ   351 ಪೊಲೀಸ್ ಅಧಿಕಾರಿಗಳು, 1704 ಕಾನ್ಸ್ ಟೇಬಲ್ಸ್  ಗಳು,  450 ಗೃಹರಕ್ಷಕ ದಳದ ಸಿಬ್ಬಂದಿ,  5 ಕೆಎಸ್ ಆರ್ ಪಿ ತುಕಡಿ, 3 ಎಎಸ್ ಪಿ 10 ಡಿವೈಎಸ್ ಪಿ 37 ಸಿಪಿಐ ಮತ್ತು 100 ಹೆ್ಚ್ಚು ಪಿಎಸ್ ಐಗಳನ್ನ ನಿಯೋಜಿಸಲಾಗಿದೆ.

ವಿಜಯನಗರ, ಕೊಪ್ಪಳ, ರಾಯಚೂರು, ಗದಗದಿಂದ ಭದ್ರತೆಗೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದಾರೆ.

Key words: Bharat Jodo Yatra -today – Bellary- Police -tight security.