ಭಾರತ್ ಬಂದ್ ಎಫೆಕ್ಟ್: ಬಸ್ ನಿಲ್ದಾಣದಲ್ಲಿ ನಿತ್ರಾಣಗೊಂಡು ಕುಸಿದು ಬಿದ್ದ ಮಹಿಳೆ…

ಮೈಸೂರು,ಡಿಸೆಂಬರ್,8,2020(www.justkannada.in):  ನೂತನ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಭಾರತ್ ಬಂದ್ ಗೆ ಕರೆ ನೀಡಿದ್ದು ಈ ಹಿನ್ನೆಲೆ ರಾಜ್ಯದಲ್ಲೂ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಭಾರತ ಬಂದ್ ಎಫೆಕ್ಟ್ ರಾಜ್ಯದ ಎಲ್ಲೆಡೆ ತಟ್ಟಿದ್ದು, ಈ ನಡುವೆ  ಮೈಸೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ನಿತ್ರಾಣಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ಬನ್ನೂರಿಗೆ ತೆರಳಲು ಮಗಳ ಜೊತೆ ಬಂದಿದ್ದ ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲೇ ಕುಸಿದು ಬಿದ್ದಿದ್ದು ಈ ವೇಳೆ  ಅಲ್ಲಿದ್ಧ ಪೊಲೀಸರು ಮತ್ತು ಸಾರಿಗೆ ಸಿಬ್ಬಂದಿ ನೆರವಿಗೆ ಧಾವಿಸಿದರು.Bharat Bandh –Effect- woman – fell- Getting sick –mysore-bus stop

ಪೊಲೀಸರು ನಿತ್ರಾಣಗೊಂಡಿದ್ದ ಮಹಿಳೆಯನ್ನ ಆಟೋದಲ್ಲಿ ಕೆ‌. ಆರ್ ಆಸ್ಪತ್ರೆಗೆ ರವಾನಿಸಿದರು. ಈ ವೇಳೆ ಆಟೋಗೆ ದುಡ್ಡು ಕೊಟ್ಟು ಎ.ಎಸ್.ಐ ದೀಪಕ್ ಪ್ರಸಾದ್ ಮಾನವೀಯತೆ ಮೆರೆದಿದ್ದಾರೆ.

Key words: Bharat Bandh –Effect- woman – fell- Getting sick –mysore-bus stop