ಭೈರತಿ ಸುರೇಶ್ ರನ್ನು ಎರಡನೇ ಮುಖ್ಯಮಂತ್ರಿ ಎಂದ ಶಾಸಕ ಜಿ.ಟಿ ದೇವೇಗೌಡ

ಬೆಂಗಳೂರು,ಮಾರ್ಚ್,13,2026 (www.justkannada.in):  ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಅವರನ್ನ ಎರಡನೇ ಮುಖ್ಯಮಂತ್ರಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಕರೆದಿದ್ದಾರೆ.

ಇಂದು ವಿಧಾನಸಭೆಯಲ್ಲಿ  ಪ್ರಶ್ನೋತರ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಪ್ರಸ್ತಾಪಿಸಿದರು.  ಸಮಸ್ಯೆ ಪರಿಹಾರಕ್ಕೆ ಸಿಎಂಗೆ 40 ವರ್ಷಗಳ  ಅನುಭವವಿದೆ ನಗರಾಭಿವೃದ್ದಿ ಸಚಿವರು ಹೇಳಿದರೇ ಸಿಎಂ ಕೇಳಿಯೇ ಕೇಳುತ್ತಾರೆ.  ಬೈರತಿ ಸುರೇಶ್  ಅಂದರೆ 2ನೇ ಸಿಎಂ ಇದ್ದಂಗೆ  ಮುಖ್ಯಮಂತ್ರಿ ಸಿದ್ದರಾಮಯ್ಯರಿಗಿಂತ ನೀವೇ ಪವರ್ ಫುಲ್  ಆಗಿದ್ದೀರಿ ಎಂದರು.

ಈ ವೇಳೆ ಭೈರತಿ ಸುರೇಶ್  ಹೇಳಿ ಹೇಳಿ ಇರುವ ಮಂತ್ರಿಸ್ಥಾನವನ್ನು ತೆಗೆದುಬಿಟ್ಟಾರು ಎಂದು ಲೇವಡಿ ಮಾಡಿದರು.

Key words: MLA, G.T. Deve Gowda, Bhairathi Suresh, second CM