ಬೇಟಿ ಬಚಾವೊ ಇಂದು ಅಪರಾಧಿ ಬಚಾವೊ ಎನ್ನುವಂತಾಗಿದೆ : ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಟ್ವೀಟ್

ಬೆಂಗಳೂರು,ಅಕ್ಟೋಬರ್,18,2020(www.justkannada.in) : ಬಿಜೆಪಿಯವರು ಪ್ರಾರಂಭಿಸಿದ್ದು ಬೇಟಿ ಬಚಾವೊ(ಹೆಣ್ಣು ಮಕ್ಕಳನ್ನು ರಕ್ಷಿಸಿ) ಎಂದು. ಅದರೆ, ಇಂದು ನಡೆಯುತ್ತಿರುವುದು ‘ಅಪರಾಧಿ ಬಚಾವೊ (ಅಪರಾಧಿ ರಕ್ಷಿಸಿ)’ ಎನ್ನುವಂತ್ತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಕ್ರೋಶವ್ಯಕ್ತಪಿಡಿಸಿದ್ದಾರೆ.jk-logo-justkannada-logoದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಬಿಜೆಪಿಯವರು ಪ್ರಾರಂಭಿಸಿದ್ದು, ಬೇಟಿ ಬಚಾವೊ(ಹೆಣ್ಣು ಮಕ್ಕಳನ್ನು ರಕ್ಷಿಸಿ) ಎಂದು. ಈಗ ನಡೆಯುತ್ತಿರುವುದು; ‘ಅಪರಾಧಿ ಬಚಾವೊ (ಅಪರಾಧಿ ರಕ್ಷಿಸಿ)’ ಎಂದು ಹೇಳಿದ್ದಾರೆ. Beti Bachao-guilty-today-culprit-Bachao-Rahul Gandhi-tweeted-against-BJP

ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಿಜೆಪಿ ಶಾಸಕ, ಅವರ ಪುತ್ರ ಮತ್ತು ಬೆಂಬಲಿಗರು ಪೊಲೀಸ್ ವಶದಿಂದ ಬಲವಂತವಾಗಿ ಬಿಡಿಸಿದ ಪ್ರಕರಣದ ವರದಿಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ ಟೀಕಿಸಿದ್ದಾರೆ.

key words : Beti Bachao-guilty-today-culprit-Bachao-Rahul Gandhi-tweeted-against-BJP