ಬೇಷರಂ ರಂಗ್ ಹಾಡಿನ ವಿವಾದ: ದೀಪಿಕಾ-ಶಾರುಖ್ ಪರ ನಟ ಪ್ರಕಾಶ್ ರಾಜ್ ಬ್ಯಾಟಿಂಗ್

ಬೆಂಗಳೂರು, ಡಿಸೆಂಬರ್ 18, 2022 (www.justkannada.in): ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕೆಲವರು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ದೀಪಿಕಾ ಹಾಗೂ ಚಿತ್ರತಂಡದ ಪರ ನಟ ಪ್ರಕಾಶ್ ರಾಜ್ ಬ್ಯಾಟಿಂಗ್ ಮಾಡಿದ್ದಾರೆ.

ʼಕೇಸರಿ ಬಟ್ಟೆ ತೊಟ್ಟ ಸ್ವಾಮಿಗಳು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ.. ಆದರೆ ಚಿತ್ರದಲ್ಲಿ ತೊಟ್ಟ ಕೇಸರಿ ಬಟ್ಟೆ ಅಲ್ಲ’ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  ʼಕೇಸರಿ ಬಟ್ಟೆ ತೊಟ್ಟ ಸ್ವಾಮಿಗಳು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ.. ಆದರೆ ಚಿತ್ರದಲ್ಲಿ ತೊಟ್ಟ ಕೇಸರಿ ಬಟ್ಟೆ ಅಲ್ಲ.ʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಂದಹಾಗೆ ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ನಟನೆಯ, ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿರುವ ʼಪಠಾಣ್ʼ ಚಿತ್ರ ಕುರಿತ ವಿವಾದ ಪರ-ವಿರೋಧ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ.